ಮೈಸೂರು

ಸುಬ್ರಹ್ಮಣ್ಯ ಸೇವಾ ಗ್ರಂಥಾಲಯದ ನೂತನ ಕಟ್ಟಡ ಉದ್ಘಾಟನೆ

ಮೈಸೂರು ಮಹಾನಗರ ಪಾಲಿಕೆ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ನಗರ ಕೇಂದ್ರ ಗ್ರಂಥಾಲಯ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ವಾರ್ಡ್‍ ನಂಬರ್ 26 ರಲ್ಲಿ ನಿರ್ಮಿಸಲಾಗಿರುವ ಸುಬ್ರಹ್ಮಣ್ಯ ಸೇವಾ ಗ್ರಂಥಾಲಯದ ನೂತನ ಕಟ್ಟಡವನ್ನು ಸಚಿವ ತನ್ವೀರ್ ಸೇಠ್ ಉದ್ಘಾಟಿಸಿದರು.

ಹೆಬ್ಬಾಳ್ 3ನೇ ಹಂತದಲ್ಲಿರುವ ಈ ಗ್ರಂಥಾಲಯವನ್ನು ಮೈಸೂರು ಪಾಲಿಕೆ 8 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದೆ.

ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಶಾಸಕರಾದ ವಾಸು, ಮೇಯರ್ ಬಿ.ಎಲ್. ಭೈರಪ್ಪ,  ಉಪ ಮೇಯರ್ ವನಿತಾ, ಪಾಲಿಕೆ ಸದಸ್ಯರಾದ ಚಲುವೇಗೌಡ, ಪುಷ್ಪಲತಾ ಚಿಕ್ಕಣ್ಣ, ಎಂ.ಶಿವಣ್ಣ, ಪಾಲಿಕೆ ಆಯುಕ್ತ ಜಗದೀಶ್, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply

comments

Related Articles

error: