ಕರ್ನಾಟಕ

ದಾಸನಹುಂಡಿಯಲ್ಲಿ ಹೆಬ್ಬಾವು ಪ್ರತ್ಯಕ್ಷ

ರಾಜ್ಯ(ಚಾಮರಾಜನಗರ)ಆ.9:- ಯಳಂದೂರು ತಾಲೂಕಿನ ದಾಸನಹುಂಡಿ ಗ್ರಾಮದ ರವಿಬಾಬುರವರ ದಾಳಿಂಬೆ ತೋಟದಲ್ಲಿ ಬುಧವಾರ ಹೆಬ್ಬಾವೊಂದು ಕಾಣಿಸಿಕೊಂಡಿತ್ತು. ತೋಟದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಶ್ರೀನಿವಾಸಬಾಬು ತಕ್ಷಣ ಸಂತೇಮರಹಳ್ಳಿಯ ಸ್ನೇಕ್ ಮಹೇಶ್‍ ಅವರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಸ್ನೇಕ್ ಮಹೇಶ್ ತಮ್ಮ ಸಹದ್ಯೋಗಿ ಸ್ನೇಕ್ ಕೆಂಪರಾಜುರವರ ಜೊತೆಗೂಡಿ ಹೆಬ್ಬಾವನ್ನು ಹಿಡಿದು ಅರಣ್ಯ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಬಿಳಿಗಿರಿರಂಗನ ಬೆಟ್ಟದ ಕಾಡಿಗೆ ಬಿಟ್ಟಿದ್ದಾರೆ. (ಜಿ.ಎಸ್,ಎಸ್.ಎಚ್)

Leave a Reply

comments

Related Articles

error: