ಪ್ರಮುಖ ಸುದ್ದಿಮೈಸೂರು

ತಮಿಳುನಾಡು ಸಿಎಂ ಜಯಲಲಿತಾರಿಂದ ಚಾಮುಂಡಿಗೆ ಹರಕೆ ಸಲ್ಲಿಕೆ

jayaತಮಿಳುನಾಡು ಸಿಎಂ ಜಯಲಲಿತಾ ತಮ್ಮ ಆರೋಗ್ಯ ಸುಧಾರಿಸಲಿ ಎಂದು ಆರಾಧ್ಯದೈವ ಚಾಮುಂಡಿಗೆ ಹರಕೆ ಸಲ್ಲಿಸಿದ್ದಾರೆ.

ಚಾಮುಂಡಿ ದೇವಾಲಯದ ಒಳಾಂಗಣದಲ್ಲಿನ ಆಂಜನೇಯ ಹಾಗೂ ಗಣಪತಿ ವಿಗ್ರಹಕ್ಕೆ ಚಿನ್ನದ ಲೇಪನದ ಮುಖವಾಡವನ್ನು ಜಯಲಲಿತಾ ಅವರು ತಮ್ಮ ಕಾರ್ಯಕರ್ತರ ಮೂಲಕ ಕಾಣಿಕೆಯಾಗಿ ನೀಡಿದ್ದಾರೆ. ಈ ಕಾಣಿಕೆಯನ್ನು ದೇವಾಲಯದ ಸಿಬ್ಬಂದಿ ದೇವರಿಗೆ ಅರ್ಪಿಸಿದ್ದಾರೆ.

ಆಂಜನೇಯ ವಿಗ್ರಹಕ್ಕೆ ಮುಖವಾಡ ಸಹಿತ ಚಿನ್ನದ ಕವಚ, ಗಣಪತಿ ವಿಗ್ರಹಕ್ಕೆ ಚಿನ್ನದ ಕವಚ ಮತ್ತು ಆಯುಧಗಳನ್ನು ಅರ್ಪಿಸಲಾಗಿದೆ.

ಕಳೆದ ಒಂದು ತಿಂಗಳಿಂದ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಸಿಎಂ ಜಯಲಲಿತಾ ಅವರು ಚಾಮುಂಡೇಶ್ವರಿಯ ಭಕ್ತರಾಗಿದ್ದಾರೆ. ಆರೋಗ್ಯ ಸುಧಾರಿಸಲಿ ಎಂದು ಈ ಕಾಣಿಕೆಯನ್ನು ದೇವರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

Leave a Reply

comments

Related Articles

error: