ಮೈಸೂರು

ವಿವೇಕಾನಂದರ ಆಲೋಚನೆಗಳನ್ನು ಅಳವಡಿಸಿಕೊಳ್ಳಿ: ಡಾ. ಪೈ

ಜೀವನ ಶಿಸ್ತುಬದ್ಧವಾಗಿರಬೇಕು. ಇಚ್ಛಾಶಕ್ತಿ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಗುರಿ ತಲುಪಲು ಸಾಧ್ಯ. ಸ್ವಾಮಿ ವಿವೇಕಾನಂದರ ಆಲೋಚನೆಗಳನ್ನು ಕೆಲವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಹಾನ್ ವ್ಯಕ್ತಿಗಳಾಗಿದ್ದಾರೆ. ಹಾಗೇ ಎಲ್ಲರೂ ಅವರ ಆಲೋಚನೆಗಳನ್ನು ಅಳವಡಿಸಿಕೊಂಡರೆ ಜೀವನ ಸುಂದರವಾಗಿರುತ್ತದೆ ಎಂದು ಸ್ವಾಮಿ ವಿವೇಕಾನಂದ ಪೀಠದ ಸಂದರ್ಶಕ, ಪ್ರಾಧ್ಯಾಪಕ ಡಾ.ರಾಘವೇಂದ್ರ ಪೈ ಹೇಳಿದರು.

ಮೈಸೂರು ವಿವಿಯ ಮಾನಸಗಂಗೋತ್ರಿಯ ಆವರಣದಲ್ಲಿ ನಡೆದ ಸ್ವಾಮಿ ವಿವೇಕಾನಂದರು ಮತ್ತು ಬದುಕಿನ ಕಲೆ ಕುರಿತು ಶುಕ್ರವಾರ ಏರ್ಪಡಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ.ರಾಘವೇಂದ್ರ ಪೈ ಮಾತನಾಡಿದರು.

ಬದುಕಿಗೊಂದು ಗುರಿ ಇರಬೇಕು. ನಮ್ಮ ಅವಶ್ಯಕತೆಗಳನ್ನು ಪೂರೈಸಲು ನಾವು ಗುರಿಯನ್ನು ತಲುಪಲೇಬೇಕು. ಜೀವನ ಶಿಸ್ತುಬದ್ಧವಾಗಿದ್ದಾಗ ಇಚ್ಛಾಶಕ್ತಿ ಇದ್ದವರಿಗೆ, ಪ್ರಾಮಾಣಿಕ ಪ್ರಯತ್ನ ನಡೆಸುವವರಿಗೆ ಯಶಸ್ಸು ಸಿಗುತ್ತದೆ. ಗೆಲುವು ಸುಲಭವಾಗಿ ಸಿಗುವುದಿಲ್ಲ. ಹಲವು ಎಡರು-ತೊಡರುಗಳನ್ನು ದಾಟಿದ ನಂತರವೇ ಗೆಲುವು ಸಿಗಲಿದೆ. ಸ್ವಾಮಿ ವಿವೇಕಾನಂದರು ಸಹ ನಿರಾಶರಾಗದೇ ಪ್ರಾಮಾಣಿಕವಾಗಿ ಶ್ರಮಿಸಿ ಗೆಲುವಿನ ದಾರಿ ಕಂಡುಕೊಂಡರು ಎಂದು ತಿಳಿಸಿದರು.

ವೇದಿಕೆಯಲ್ಲಿ ತತ್ವ ಶಾಸ್ತ್ರ ವಿಭಾಗದ ಪ್ರೊ.ಡೆನಿಯಲ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: