
ದೇಶಪ್ರಮುಖ ಸುದ್ದಿ
ನಟ ದಿಲೀಪ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ : ಆಸ್ಪತ್ರೆಯಿಂದ ಡಿಸ್ಚಾರ್ಜ್
ದೇಶ(ಮುಂಬೈ)ಆ.10:- ಬಾಲಿವುಡ್ ನಲ್ಲಿ ದುರಂತಕಥೆಗಳ ನಾಯಕನೆಂದೇ ಗುರುತಿಸಲ್ಪಟ್ಟ ದಿಲೀಪ್ ಕುಮಾರ್ ಆರೋಗ್ಯ ಸುಧಾರಿಸಲ್ಪಟ್ಟಿದೆ. ಕಿಡ್ನಿ ಸಂಬಂಧಿತ ಸಮಸ್ಯೆಗಳ ಕುರಿತಂತೆ ಆಸ್ಪತ್ರೆಯಲ್ಲಿ ಎಂಟು ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಮನೆಗೆ ವಾಪಸ್ಸಾಗಿದ್ದಾರೆ.
ಬುಧವಾರ ದಿಲೀಪ್ ಕುಮಾರ್ ಅವರನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಪತ್ನಿ ಸಾಯರಾಬಾನು ಜೊತೆ ಮನೆಗೆ ವಾಪಸ್ಸಾಗಿದ್ದಾರೆ. ಕಳೆದ ಬುಧವಾರ ಮೂತ್ರಾಶಯ ಸೋಂಕಿನಿಂದ ಬಳಲುತ್ತಿದ್ದ 94ವರ್ಷದ ದಿಲೀಪ್ ಕುಮಾರ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. (ಎಸ್.ಎಚ್)