ಕರ್ನಾಟಕಪ್ರಮುಖ ಸುದ್ದಿ

6 ನೇ ತರಗತಿಯಿಂದಲೇ ಎನ್‌ಸಿಇಆರ್‌ಟಿ ಪಠ್ಯಕ್ರಮ: ಮುಂದಿನ ವರ್ಷದಿಂದ ಜಾರಿ ಸಾಧ್ಯತೆ

ಬೆಂಗಳೂರು, ಆ.10: ಮುಂಬರುವ ಶೈಕ್ಷಣಿಕ ವರ್ಷದಿಂದ ಆರನೇ ತರಗತಿಯಿಂದಲೇ ರಾಜ್ಯದ ಪಠ್ಯಕ್ರಮ ಕೈಬಿಟ್ಟು ಕೇಂದ್ರ (ಎನ್‌ಸಿಇಆರ್‌ಟಿ) ಪಠ್ಯಕ್ರಮ ಬೋಧಿಸಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಿದ್ಧತೆ ನಡೆಸುತ್ತಿದೆ.

ಸದ್ಯ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ಗಣಿತದ ವಿಷಯಗಳಿಗೆ ಎನ್‌ಸಿಇಆರ್‌ಟಿ ಪಠ್ಯಗಳನ್ನು ಬೋಧನೆ ಮಾಡಲಾಗುತ್ತಿದೆ. 10ನೇ ತರಗತಿಗೂ ಮುಂದಿನ ವರ್ಷದಿಂದಲೇ ವಿಸ್ತರಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಈಗಾಗಲೇ ಪ್ರಕಟಿಸಿದ್ದಾರೆ. ಸಮಾಜ ವಿಜ್ಞಾನವನ್ನೂ ಕೇಂದ್ರೀಯ ಪಠ್ಯಕ್ರಮದಿಂದ ತರ್ಜುಮೆ ಮಾಡಿಕೊಳ್ಳಲು ಯೋಚಿಸಲಾಗಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ನಿರ್ಧಾರ ಕೈಬಿಡಲಾಗಿತ್ತು.

6 ಮತ್ತು 7ನೇ ತರಗತಿಯ ವಿಜ್ಞಾನ ಮತ್ತು ಗಣಿತ ಪುಸ್ತಕಗಳನ್ನು (ಎನ್‌ಸಿಇಆರ್‌ಟಿ) ಪಠ್ಯ ಪುಸ್ತಕಗಳನ್ನು ಯಥಾವತ್ ಕನ್ನಡಕ್ಕೆ ತರ್ಜುಮೆ ಮಾಡಿಸುವಂತೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್‌ ಸೇಟ್‌ ಅವರು ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಮೌಖಿಕ ಸೂಚನೆ ನೀಡಿದ್ದಾರೆ. 2018ರ ಜೂನ್ 1ಕ್ಕೆ ಪಠ್ಯಪುಸ್ತಕಗಳನ್ನು ವಿತರಿಸಬೇಕಾದರೆ ಈ ವರ್ಷದ ನವೆಂಬರ್ ವೇಳೆಗೆ ಮುದ್ರಣದ ಟೆಂಡರ್ ಅಂತಿಮ ಆಗಬೇಕು. ಹೀಗಾಗಿ 6,7 ಮತ್ತು 8ನೇ ತರಗತಿಯ ಕೋರ್‌ ವಿಷಯಗಳ ಪಠ್ಯ ಪುಸ್ತಕಗಳ ಭಾಷಾಂತರ ಕಾರ್ಯ ತಕ್ಷಣ ಆರಂಭಿಸುವಂತೆ ಅವರು ಸೂಚನೆ ನೀಡಿದ್ದಾರೆ.  (ವರದಿ: ಎಲ್.ಜಿ)

Leave a Reply

comments

Related Articles

error: