ಪ್ರಮುಖ ಸುದ್ದಿಮೈಸೂರು

ಮೂರು ದಿನಗಳ ಒಳಗೆ ದಸರಾ ಹದಿನಾರು ಉಪ ಸಮಿತಿಗಳ ಬಜೆಟ್ ಪಟ್ಟಿ ಸಿದ್ಧ ಪಡಿಸಲು ಜಿಲ್ಲಾಧಿಕಾರಿ ಡಿ.ರಂದೀಪ್ ಸೂಚನೆ

ಮೈಸೂರು,ಆ.10:- ಮೈಸೂರು ದಸರಾ ಮಹೋತ್ಸವ ಹಿನ್ನಲೆಯಲ್ಲಿ  ದಸರಾ ವಿಶೇಷ ಅಧಿಕಾರಿ, ಜಿಲ್ಲಾಧಿಕಾರಿ ಡಿ.ರಂದೀಪ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ  ದಸರಾ ಉಪ ಸಮಿತಿ ಸಭೆ ನಡೆಯುತ್ತಿದೆ.
ಮೂರು ದಿನಗಳ ಒಳಗೆ ದಸರಾ ಹದಿನಾರು ಉಪ ಸಮಿತಿಗಳ ಬಜೆಟ್  ಪಟ್ಟಿ ಸಿದ್ಧ ಪಡಿಸಲು  ಜಿಲ್ಲಾಧಿಕಾರಿ  ಡಿ.ರಂದೀಪ್ ಸೂಚನೆ ನೀಡಿದ್ದಾರೆ. ದಸರಾ ಉಪ ಸಮಿತಿಗಳ ಕಾರ್ಯಕ್ರಮಗಳ ಪಟ್ಟಿ ಸಿದ್ಧತೆಗೆ ಉಪ ಸಮಿತಿಗಳ ವಿಶೇಷ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದಾರೆ.
ಆಗಸ್ಟ್ ತಿಂಗಳ  ಒಳಗಾಗಿ ಉಪ ಸಮಿತಿಗಳ ಕಾರ್ಯಕ್ರಮಗಳ  ಪಟ್ಟಿ ಸಿದ್ಧಗೊಳ್ಳಬೇಕು. ಉಪ ಸಮಿತಿಗಳಲ್ಲಿ  ಅನಾವಶ್ಯಕ ಖರ್ಚು ಮಾಡಬಾರದು.  ಅನಾವಶ್ಯಕ ಖರ್ಚು ಮಾಡಿದರೆ  ಆಯಾ ಇಲಾಖೆಯಿಂದಲೇ ಭರಿಸಬೇಕು ಎಂದು ದಸರಾ ಉಪ ಸಮಿತಿ ಉಪ ವಿಶೇಷ ಅಧಿಕಾರಿಗಳಿಗೆ  ಜಿಲ್ಲಧಿಕಾರಿಗಳು ಸೂಚಿಸಿದ್ದಾರೆ.  2 ದಿನಗಳಲ್ಲಿ ದಸರಾ ವೆಬ್ ಸೈಟ್ ಓಪನ್ ಆಗಲಿದೆ. ದಸರಾ ಮಹೋತ್ಸವ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಕೆ  ಮಾಡಬೇಕು ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ದಸರಾ ಉಪ ಸಮಿತಿ ಕಾರ್ಯಕ್ರಮಗಳು, ಗೊಂದಲಗಳ ನಿವಾರಣೆಗೆ ದಸರಾ ಉಪ ಸಮಿತಿ ಉಪ ವಿಶೇಷಾಧಿಕಾರಿ , ಕಾರ್ಯಾಧ್ಯಕ್ಷರು, ಕಾರ್ಯದರ್ಶಿ ಒಳಗೊಂಡ ಪ್ರತ್ಯೇಕ ವಾಟ್ಸಪ್ ಗ್ರೂಪ್ ರಚನೆ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ದಸರಾ ಉಪ ಸಮಿತಿ ವಿಶೇಷ ಅಧಿಕಾರಿಗಳು ಪಾಲ್ಗೊಂಡಿದ್ದರು. (ಆರ್.ವಿ,ಕೆ.ಎಸ್,ಎಸ್.ಎಚ್)

Leave a Reply

comments

Related Articles

error: