ದೇಶಪ್ರಮುಖ ಸುದ್ದಿ

ಹಮೀದ್ ಅನ್ಸಾರಿಯವರಿಂದ ಎಷ್ಟೋ ವಿಷಯಗಳನ್ನು ತಿಳಿಯುವ ಕಲಿಯುವ ಅವಕಾಶ ಲಭಿಸಿತು : ಪ್ರಧಾನಿ ಮೋದಿ

ದೇಶ(ನವದೆಹಲಿ) ಆ.10:- ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರಿಂದ ಎಷ್ಟೋ ವಿಷಯಗಳನ್ನು ತಿಳಿಯುವ ಕಲಿಯುವ ಅವಕಾಶ ಲಭಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮುಂಗಾರು ಅಧಿವೇಶನದಲ್ಲಿ ಹಮೀದ್ ಹಮೀದ್ ಅನ್ಸಾರಿಯವರ ಬೀಳ್ಕೊಡುಗೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಅನ್ಸಾರಿಯವರ ಗುಣಗಾನ ಮಾಡಿದರು. ಎರಡು ಸದನಗಳ ವತಿಯಿಂದ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮಗೆ ನಿಮ್ಮ ಸೂಚನೆಗಳು, ಸಲಹೆಗಳ ಅವಶ್ಯಕತೆ ಯಾವತ್ತೂ ಇದ್ದು, ನೀಡುತ್ತಲೇ ಇರುತ್ತೀರಿ ಎಂದುಕೊಂಡಿದ್ದೇನೆ. ಅನ್ಸಾರಿಯವರ ಕುಟುಂಬ ಸತತ ನೂರು ವರ್ಷಗಳಿಂದಲೂ ಸಾರ್ವಜನಿಕ ಸೇವೆಯನ್ನು ಸಲ್ಲಿಸುತ್ತಲೇ ಬಂದಿದೆ. ತಾತನ ಕಾಲದಿಂದಲೂ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ. ಅಂಥಹ ಒಂದು ಪರಿವಾರದ ಹಿನ್ನೆಲೆಯಿಂದ ಬಂದಿದ್ದೀರಿ, ನಿಮ್ಮ ಕುಟುಂಬ ಹಲವಾರು ಚಳುವಳಿಗಳಲ್ಲಿಯೂ ಪಾಲ್ಗೊಂಡಿದೆ. ನಿಮ್ಮ ಕರೀಯರ್ ಡಿಪ್ಲೊಮ್ಯಾಟಿಕ್ ಆಗಿದೆ. ಕರಿಯರ್ ಡಿಪ್ಲೊಮ್ಯಾಟಿಕ್ ಅಂದರೇನು ಎನ್ನುವುದು ನನಗೆ ಪ್ರಧಾನಮಂತ್ರಿಯಾದ ಬಳಿಕವೇ ಅರ್ಥವಾಯಿತು ಎಂದರು. ನಗುವುದು, ಹಸ್ತಲಾಘವ ಮಾಡುವುದು ಇವುಗಳೆಲ್ಲ ತಕ್ಷಣಕ್ಕೆ ಅರ್ಥವಾಗುವುದಿಲ್ಲ. ಇವುಗಳಿಗೆ ತರಬೇತಿಯೂ ಇಲ್ಲ. ಆದರೆ  ಕಳೆದ ಹತ್ತು ವರ್ಷಗಳಿಂದ ಈ ಕೌಶಲ್ಯದ ಉಪಯೋಗ ಈ ಸದನದಲ್ಲಿ ಎಲ್ಲರನ್ನೂ ಸಂಭಾಳಿಸುವಾಗ ನಿಮಗೆ ಆಗಿರಬಹುದು ಎಂದರು.  ಮೋದಿಯವರ ಈ ಮಾತುಗಳನ್ನು ಕೇಳಿ ಹಮೀದ್ ಅನ್ಸಾರಿಯವರ ಮುಖದಲ್ಲಿ ಮಂದಹಾಸ ಮಿನುಗಿತು ಎಂದು ದೆಹಲಿ ಪತ್ರಿಕೆಯೊಂದು ವರದಿ ಮಾಡಿದೆ. (ಎಸ್.ಎಚ್)

Leave a Reply

comments

Related Articles

error: