ಮೈಸೂರು

ರಂಗಭೂಮಿ ಸಂಸ್ಕೃತಿಯನ್ನು ಇನ್ನಷ್ಟು ಶ್ರೀಮಂತಗೊಳಿಸಿ: ವಿದ್ಯಾರ್ಥಿಗಳಿಗೆ ರಂಗಾಯಣ ನಿರ್ದೇಶಕ ಜನಾರ್ದನ್ ಕರೆ

ಸಾಮೂಹಿಕ ಕಲಿಕೆಯಿಂದ ರಂಗಭೂಮಿಯಲ್ಲಿ ವಿಶೇಷ ಸಾಧನೆ ಮಾಡಬಹುದು ಎಂದು ರಂಗಾಯಣದ ನಿರ್ದೇಶಕ ಹೆಚ್. ಜನಾರ್ದನ್ (ಜೆನ್ನಿ) ಹೇಳಿದ್ದಾರೆ. ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಪದವಿ ಕಾಲೇಜಿನಲ್ಲಿ ಪ್ರತಿಭಾ ವೇದಿಕೆ ಹಾಗೂ ಸಾರನಾಥ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ರಂಗಭೂಮಿಯಲ್ಲಿ ಪರಿಶ್ರಮ ಅತಿ ಮುಖ್ಯ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಸಾಧನೆ ಮಾಡಿ ರಂಗಭೂಮಿಯನ್ನು ಮತ್ತುಷ್ಟು ಶ್ರೀಮಂತಗೊಳಿಸಬೇಕು ಎಂದು ಆಶಿಸಿದರು. ಬಿ.ಕೆ. ಕಾರಂತರೊಂದಿಗೆ ಕಳೆದ ಸಮಯವನ್ನು ಇದೇ ಸಂದರ್ಭ ಜನಾರ್ದನ್ ಮೆಲುಕು ಹಾಕಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ವಿ. ಪ್ರಭಾಕರ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಜಾಗೃತಗೊಳಿಸಬೇಕು ಎಂದು ಕರೆ ನೀಡಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಆರ್. ವಾಸುದೇವ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: