ಪ್ರಮುಖ ಸುದ್ದಿಮೈಸೂರು

ಡಿಪೋ ಕಳ್ಳತನ ಪ್ರಕರಣ: ನಾಲ್ವರ ಬಂಧನ

theft-2ಚಾಮರಾಜ ನಗರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋದಲ್ಲಿ ಇರಿಸಲಾದ ಸುಮಾರು 28 ಲಕ್ಷ ರೂ. ನಗದನ್ನು ಅ. 17 ರಂದು ಕಳ್ಳರು ಕದ್ದೊಯ್ದಿದ್ದರು. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ  ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಜೈನ್ ಕಳ್ಳರು ಸೆರೆಯಾದ ವಿಷಯವನ್ನು ಬಹಿರಂಗಪಡಿಸಿದರು. ಬಂಧಿತರನ್ನು ಚಾಮರಾಜ ನಗರದ ಅಬ್ದುಲ್ ರೆಹಮಾನ್, ಕಿಪಾಯತುಲ್ಲಾ ಷರೀಫ್, ಲೋಕೇಶ್ ಹಾಗೂ ಮತ್ತೋರ್ವ ಅಪರಾಧಿ ಅಪ್ರಾಪ್ತನಾಗಿದ್ದಾನೆ ಎಂದು ತಿಳಿಸಿದರು.

ಬಂಧಿತರಿಂದ 28 ಲಕ್ಷ ರೂ.ಗಳ ಪೈಕಿ 18 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಗ್ಯಾಸ್ ಕಟರ್, ಆಟೋ, ಖಾರದಪುಡಿ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಳ್ಳರ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಮುತ್ತುರಾಜು, ಡಿವೈಎಸ್ಪಿ ಗಂಗಾಧರ ಸ್ವಾಮಿ ಉಪಸ್ಥಿತರಿದ್ದರು.

Leave a Reply

comments

Related Articles

error: