ಮೈಸೂರು

ಪ್ರೇಮಕಥಾ ಹಂದರದ ‘ಕಾದಲ್’ ಆಗಸ್ಟ್ 18ರಂದು ಬಿಡುಗಡೆ

ಮೈಸೂರು,ಆ.10 : ಪ್ರೀತ್ಸೋ ಹೃದಯಗಳ ಸುತ್ತ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಪ್ರೇಮಕಥಾ ಹಂದರವಿರುವ ಕಾದಲ್  ಕನ್ನಡ ಚಲನಚಿತ್ರ ಆಗಸ್ಟ್ 18 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿಸಲಾಗುವುದು ಎಂದು ಚಿತ್ರದ ನಿರ್ದೇಶಕ ಮುರಳಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಮೊದಲ ನಿರ್ದೇಶನದ ಚಿತ್ರ ಮುಮ್ತಾಜ್ . ನನ್ನ ಎರಡನೇ ನಿರ್ದೇಶದ ಚಿತ್ರ ಕಾದಲ್ . ಪ್ರೇಮಕತೆಯೊಂದಿಗೆ ಕೌಟುಂಬಿಕ ಹಿನ್ನಲೆಗಳು, ಒಬ್ಬರನ್ನೊಬ್ಬರು ನೋಡದೆಯೇ ಹುಟ್ಟುವ ಪ್ರೀತಿ ನಂತರ ಅದು ಏನೆಲ್ಲಾ ತಿರುವುಗಳನ್ನು ಪಡೆಯುತ್ತದೆ ಎಂಬುದು ಕಥೆಯ ಮೂಲವಾಗಿದೆ ಎಂದು ತಿಳಿಸಿದರು.

ಮೈಸೂರು, ಬೆಂಗಳೂರು,ಚಿಕ್ಕಮಗಳೂರು ಸುತ್ತಮುತ್ತಲ ಪ್ರಕೃತಿ ಮಡಿನಲ್ಲಿ 45 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಸುಮಾರು ಒಂದುವರೆ ಕೋಟಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಇದೇ ತಿಂಗಳು 18 ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಗೊಳ್ಳಲಿದೆ ಎಂದರು.

ನಾಯಕನಟನಾಗಿ ಆಕಾಶ್, ಮೈಸೂರು ಮೂಲದ ರಂಗಭೂಮಿ ನಟಿ ಧರಣಿ ನಾಯಕಿಯಾಗಿ ಇವರೊಂದಿಗೆ ಸುಧಾಕರ್, ಮಂಜುನಾಥ್, ಭಾವನ ಸೇರಿದಂತೆ ಬಹುತೇಕ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೆ.ಬಿ.ಪ್ರವೀಣ ನಾಲ್ಕು ಹಾಡುಗಳಿಗೆ ಸ್ವರ ಸಂಯೋಜಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಚಿತ್ರದ ನಟ ತುಮಕೂರಿನ ಆಕಾಶ,ಮೈಸೂರಿನ ಮೂಲದ ನಟಿ ಧರಣಿ, ಸೇರಿದಂತೆ ಮತ್ತಿತರರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: