ದೇಶಪ್ರಮುಖ ಸುದ್ದಿ

ದೆಹಲಿಯಲ್ಲಿ ಪ್ಲಾಸ್ಟಿಕ್ ಚೀಲ ಬಳಸಿದರೆ 5 ಸಾವಿರ ರೂ. ದಂಡ: ಎನ್‌ಜಿಟಿ ಘೋಷಣೆ

ನವದೆಹಲಿ,ಆ.10: ಜೈವಿಕವಾಗಿ ಕೊಳೆಯದ ಪ್ಲಾಸ್ಟಿಕ್‌ ಚೀಲಗಳನ್ನು ರಾಷ್ಟ್ರ ರಾಜಧಾನಿಯಲ್ಲಿ ಬಳಕೆ ಮಾಡದಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್‌ಜಿಟಿ) ಮಧ್ಯಂತರ ನಿಷೇಧ ಹೇರಿದೆ.

50 ಮೈಕ್ರಾನ್‌ ಪ್ರಮಾಣಕ್ಕಿಂತಲೂ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ ಚೀಲ ಬಳಕೆ ಮಾಡಿದರೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಎನ್‌ಜಿಟಿ ಮುಖ್ಯಸ್ಥ ನ್ಯಾ.ಸ್ವತಂತರ್‌ ಕುಮಾರ್‌ ಘೋಷಿಸಿದ್ದಾರೆ. ಸೂಚಿತ ಗುಣಮಟ್ಟಕ್ಕಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್‌ ಸಂಗ್ರಹವನ್ನು ಒಂದು ವಾರದೊಳಗೆ ವಶಪಡಿಸಿಕೊಳ್ಳುವಂತೆ ದೆಹಲಿ ಸರ್ಕಾರಕ್ಕೆ ಎನ್‌ಜಿಟಿ ಸೂಚಿಸಿದೆ.

ಪ್ಲಾಸ್ಟಿಕ್‌ ಸಂಬಂಧಿಸಿದ ತ್ಯಾಜ್ಯ ನಿರ್ವಹಣೆಗೆ ಅನುಸರಿಸುತ್ತಿರುವ ಕ್ರಮಗಳ ಕುರಿತು ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಎಎಪಿ ನೇತೃತ್ವದ ಸರ್ಕಾರ ಅಫಿಡವಿಟ್‌ ಸಲ್ಲಿಸುವಂತೆ ಸೂಚಿಸಿದೆ. ಬಳಸಿ ಬಿಸಾಡಬಹುದಾದ ಪ್ಲಾಸ್ಟಿಕ್‌ ಬಳಕೆಯನ್ನು 2017ರ ಜನವರಿಯಿಂದ ಅನ್ವಯವಾಗುವಂತೆ ನಿಷೇಧಿಸಿ ಕಳೆದ ವರ್ಷವೇ ಎನ್‌ಜಿಟಿ ಆದೇಶಿಸಿತ್ತು. (ವರದಿ: ಎಲ್.ಜಿ)

Leave a Reply

comments

Related Articles

error: