ಕರ್ನಾಟಕ

ಸಾಲ ಬಾಧೆ : ಹೆತ್ತವರ ಸಮಾಧಿ ಬಳಿ ಜೀವ ಬಿಟ್ಟ ರೈತ

ರಾಜ್ಯ (ಚಿಕ್ಕಬಳ್ಳಾಪುರ), ಆಗಸ್ಟ್.10: ಕೊಳವೆಬಾವಿಗಳ ವೈಫಲ್ಯ ಹಾಗೂ ಸಾಲಬಾಧೆಯಿಂದ ಮನನೊಂದ ರೈತರೊಬ್ಬರು ತನ್ನ ತಂದೆ-ತಾಯಿಯ ಸಮಾಧಿ ಬಳಿ ಹೋಗಿ ಆತ್ಮಹತ್ಯೆ ಮಾಡಿರುವ ಘಟನೆ  ಶಿಡ್ಲಘಟ್ಟ ತಾಲೂಕಿನ ಆನೂರು ಗ್ರಾಮದಲ್ಲಿ ನಡೆದಿದೆ..

ಪ್ರಕಾಶ್(43) ಆತ್ಮಹತ್ಯೆಗೆ ಶರಣಾಗಿರುವ ರೈತ. ಮೃತ ಪ್ರಕಾಶ್ ಪತ್ನಿ ಸಾಲ ತೀರಲಿ ಅಂತ ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳಿದ್ದ ವೇಳೆ ರೈತ ಪ್ರಕಾಶ್ ತನ್ನ ಜಮೀನನಲ್ಲೇ ಇರುವ ತಂದೆ-ತಾಯಿ ಸಮಾಧಿಗಳ ಬಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ( ವರದಿ: ಪಿ. ಜೆ. )

Leave a Reply

comments

Related Articles

error: