ಕರ್ನಾಟಕ

ಬಡ ಮಕ್ಕಳಿಗೆ ಬಟ್ಟೆ ವಿತರಣೆ

ರಾಜ್ಯ(ಚಾಮರಾಜನಗರ)ಆ.10:-ಕೊಳ್ಳೇಗಾಲ ತಾಲೂಕಿನ ವೀರಮ್ಮನ ದೊಡ್ಡಿಯ ಅಂಗನವಾಡಿ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡಲ್‍ಜಲಾಶಯ ಎಲ್ಲಾ ಶಾಲೆಯ ಮಕ್ಕಳಿಗೆ 70 ಕ್ಕೂ ಹೆಚ್ಚು ಬಡ ಮಕ್ಕಳಿಗೆ ರೋಟರಿ ಮಿಡ್‍ಟೌನ್ ಕೊಳ್ಳೇಗಾಲ ವತಿಯಿಂದ ಬಟ್ಟೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಕಾಮಗೆರೆ ಸಹಯೋಗದೊಂದಿಗೆ ಕಾಮಗೆರೆಯ ಹಿರಿಯ ಆರೋಗ್ಯ ಅಧಿಕಾರಿ ವಿಜಯಕುಮಾರ್‍ ವಿತರಿಸಿದರು.
ತಾಲೂಕಿನ ವೀರಮ್ಮನ ದೊಡ್ಡಿಯ ಅಂಗನವಾಡಿ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ರೋಟರಿ ಮಿಡ್‍ಟೌನ್ ಸಂಸ್ಥೆ ಕೊಳ್ಳೇಗಾಲದ ವತಿಯಿಂದ ಗ್ರಾಮೀಣ ಪ್ರದೇಶದ ಕಂಚಗಳ್ಳಿ ಸರ್ಕಾರಿ ಗಿರಿಜನ ಆಶ್ರಮ ಶಾಲೆಯ ಮಕ್ಕಳಿಗೆ ಬಟ್ಟೆಗಳನ್ನು ವಿತರಿಸಿ ಮಾತನಾಡಿ, ಡೆಂಗ್ಯೂ ಜ್ವರದ ಲಕ್ಷಣಗಳು ಇತ್ತೀಚೆಗೆ ಕಾಣುತ್ತಿವೆ ಹಾಗಾಗಿ ಗ್ರಾಮೀಣ ಪ್ರದೇಶದ ಜನರು ಮುಂಜಾಗ್ರತೆಯಿಂದ ಇರಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಗುಂಡಾಲ್‍ ಜಲಾಶಯದ ಬೆಟ್ಟದಅಂಚಿನಲ್ಲಿ ನೂರಕ್ಕೂ ಹೆಚ್ಚು ಬೀಜದ ಉಂಡೆಗಳನ್ನು ಶಾಲೆಯ ಮಕ್ಕಳು ಹಾಗೂ ಮಿಡ್‍ಟೌನ್ ಸದಸ್ಯರ ಸಹಯೋಗದೊಂದಿಗೆ ನೆಡಲಾಯಿತು.
ರೋಟರಿ ಮಿಡ್‍ಟೌನ್‍ ಅಧ್ಯಕ್ಷರ ಪ್ರದೀಪ್ ಫೆರ್ನಾಂಡಿಸ್‍, ನಿಕಟಪೂರ್ವ ಅಧ್ಯಕ್ಷ ಮಹೇಶ್‍, ಸದಸ್ಯರಾದ ಜಗನ್ನಾಥ್‍, ನಾಗಣ್ಣ, ಶಾಲೆಯ ಮುಖ್ಯ ಶಿಕ್ಷಕ ಶಿವ ಚಂದ್ರಪ್ಪ, ಪ್ರಸನ್ನ ಹಾಗೂ  ಹೇಮಲತ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: