ಮೈಸೂರು

ಆಯುರ್ವೇದ ಔಷಧಿ ಪ್ರಮುಖ ಪಾತ್ರ ವಹಿಸುತ್ತಿದೆ: ಡಾ. ಟಿ. ಶಿವನಂದಪ್ಪ

page3leadಭಾರತದಲ್ಲಿ ಆಯುರ್ವೇದ ಔಷಧಿ ಮತ್ತು ನಾಟಿ ಔಷಧಿಯು ಅತಿ ಮುಖ್ಯ ಪಾತ್ರ ವಹಿಸುತ್ತಿದೆ ಎಂದು ವಿಜ್ಞಾನಿ ಡಾ. ಟಿ. ಶಿವನಂದಪ್ಪ ತಿಳಿಸಿದರು.

ಮೈಸೂರು ವಿವಿಯ ಲಿನಾಯುಸ್ ಸಭಾಂಗಣದಲ್ಲಿ ಸಸ್ಯ ವಿಜ್ಞಾನ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಲಾದ ಡಿಸ್ಕವರಿ ಆಫ್ ನಾವೆಲ್ ಡ್ರಗ್ಸ್ ಫ್ರಮ್ ಪ್ಲಾಂಟ್ಸ್ ಕುರಿತು ಡಾ. ಟಿ. ಶಿವನಂದಪ್ಪ ಉಪನ್ಯಾಸ ನೀಡಿದರು.

ಭಾರತದಲ್ಲಿಯೇ 15 ಸಾವಿರ ವಿವಿಧ ರೀತಿಯ ಸಸ್ಯಗಳಿದ್ದು, ಜಗತ್ತಿನಲ್ಲಿ 3 ಲಕ್ಷ ಸಸ್ಯಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. 10 ಸಾವಿರ ವಿಶೇಷ ಔಷಧೀಯ ಸಸ್ಯಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. ಇಂದು ಜಗತ್ತಿನಾದ್ಯಂತ ಆಯುರ್ವೇದಿಯ ಸಸ್ಯಗಳು ಗುರುತಿಸಿಕೊಳ್ಳತೊಡಗಿದ್ದು ಅದರ ಉಪಯೋಗವೂ ಹೆಚ್ಚಾಗುತ್ತಿದೆ ಎಂದರು.

ಸಸ್ಯ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಶೋಭಾ ಜಗನ್ನಾಥ, ಡಾ. ರವೀಶ, ಡಾ. ಸ್ವರೂಪ ಕುಮಾರ್, ಡಾ. ನಳಿನಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: