ಕರ್ನಾಟಕಮೈಸೂರು

ಆಗಸ್ಟ್ 15 ರಂದು ಶ್ರೀಕೃಷ್ಣ ಜಯಂತಿ

ಮಂಡ್ಯ, ಆಗಸ್ಟ್ 10 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 15 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಕೃಷ್ಣ ಜಯಂತಿಯನ್ನು ರೈತ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಸಮಾರಂಭದ ಉದ್ಘಾಟನೆಯನ್ನು ವಸತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಕೃಷ್ಣಪ್ಪ ಅವರು ನಡೆಸಿಕೊಡಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಮಂಡ್ಯ ವಿಧಾನ ಸಭೆ ಕ್ಷೇತ್ರದ ಶಾಸಕರಾದ ಡಾ.ಎಂ.ಹೆಚ್.ಅಂಬರೀಶ್ ಅವರು ವಹಿಸುವರು.
ಸಮಾರಂಭದಲ್ಲಿ ಡಾ. ಪ್ರದೀಪ್‍ಕುಮಾರ್ ಹೆಬ್ರಿ ಅವರು ಉಪನ್ಯಾಸ ನೀಡುವರು.

-ಎನ್.ಬಿ.

Leave a Reply

comments

Related Articles

error: