ಸುದ್ದಿ ಸಂಕ್ಷಿಪ್ತ

ಆಗಸ್ಟ್, 18 ರಂದು ವಾಹನ ಹರಾಜು

ಮಡಿಕೇರಿ ಆ.10: -ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಮೋಟಾರು ವಾಹನ ನಿರೀಕ್ಷಕರು ತಪಾಸಣೆ ನಡೆಸಿದ ಸಂದರ್ಭ, ವಿವಿಧ ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಿದ ಹಾಗೂ ತೆರಿಗೆ ಪಾವತಿಸದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಈ ವಾಹನಗಳನ್ನು ಪೊಲೀಸ್ ಠಾಣೆಗಳ ಸುಫರ್ಧಿಯಲ್ಲಿ ಇಡಲಾಗಿದೆ.  ಆದ್ದರಿಂದ ಈ ಪ್ರಕಟಣೆಯ 15 ದಿನಗಳೊಳಗೆ ವಾಹನಗಳಿಗೆ ಸಂಬಂಧಪಟ್ಟ ಮಾಲೀಕರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪ್ರಕರಣ ಇತ್ಯರ್ಥಪಡಿಸಿಕೊಂಡು ವಾಹನವನ್ನು ಬಿಡುಗಡೆಗೊಳಿಸಿಕೊಳ್ಳಬಹುದಾಗಿದೆ.

ಹರಾಜು ಪ್ರಕ್ರಿಯೆಯು ಆಗಸ್ಟ್, 18 ರಂದು ನಡೆಯಲಿದೆ. ಕೆಎ.12/5612 (ಆಟೋರಿಕ್ಷಾ)-ಟೌನ್ ಪೊಲೀಸ್ ಠಾಣೆ, ಮಡಿಕೇರಿ, ಕೊಡಗು ಜಿಲ್ಲೆ, ಚಾಸಿಸ್ ಸಂ: 77071850185(ಮೋ/ಸೈಕಲ್)- ಸುಂಟಿಕೊಪ್ಪ ಪೊಲೀಸ್ ಠಾಣೆ, ಸುಂಟಿಕೊಪ್ಪ, ವಾಹನ ಸಂ: ಕೆಎ.05/ಜೆ 2076(ಮೋ/ಸೈಕಲ್)– ವಿರಾಜಪೇಟೆ ಪೊಲೀಸ್ ಠಾಣೆ, ವಿರಾಜಪೇಟೆ. ವಾಹನ ಸಂ:ಕೆಎ.19/ಟಿಎಕ್ಸ್ 2492(ಎಲ್.ಎಂ.ವಿ)   – ಸಿದ್ದಾಪುರ ಪೊಲೀಸ್ ಠಾಣೆ, ವಾಹನ ಸಂ: ಕೆಎ.12/5174(ಹೆಚ್.ಪಿ.ವಿ)  ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ. ಹರಾಜಿನಲ್ಲಿ ಭಾಗಹಿಸುವವರು ಹೆಚ್ಚಿನ ಮಾಹಿತಿಗೆ ಕಚೇರಿ ಸಂಪರ್ಕಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ ಅವರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

Check Also

Close
error: