ಮೈಸೂರು

ಭೂಮಾಪಕರ ಪರೀಕ್ಷೆ : ನಕಲಿ ವಿದ್ಯಾರ್ಥಿಗಳ ಬಂಧನ

ಮೈಸೂರು,ಆ.11:- ಭೂಮಾಪಕರ ಪರವಾನಗಿ ನೀಡಲು ಗುರುವಾರ ನಡೆದ ಪರೀಕ್ಷೆಗೆ ಹಾಜರಾಗಿದ್ದ ನಕಲಿ ವಿದ್ಯಾರ್ಥಿ ಸೇರಿ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರನ್ನು ಕೆ.ಟಿ.ನವೀನ್ ಹಾಗೂ ಹರೀಶ್ ಎಂದು ಹೇಳಲಾಗಿದೆ. ಆರೋಪಿಗಳಿಬ್ಬರನ್ನು  ದಕ್ಷಿಣ ಠಾಣೆ ಪೊಲೀಸರು  ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ. ಮೈಸೂರಿನ ಹೊರವಲಯದ ಉತ್ತನಹಳ್ಳಿ ಸಮೀಪ ಇರುವ ಭೂಮಾಪಕರ ತರಬೇತಿ ಕೇಂದ್ರದಲ್ಲಿ ನಡೆಯುತ್ತಿದ್ದ ಪರೀಕ್ಷೆಗೆ ಹರೀಶ್ ಬದಲು ನವೀನ್ ಹಾಜರಾಗಿದ್ದ. ಆದರೆ ಪರೀಕ್ಷಾ ಮೇಲ್ವಿಚಾರಕರ ಕೈಗೆ ನವೀನ್ ಸಿಕ್ಕಿ ಬಿದ್ದಿದ್ದ. ಆ ವೇಳೆ ಹರೀಶ್ ಬದಲು ನವೀನ್ ಪರೀಕ್ಷೆಗೆ ಹಾಜರಾಗಿರುವ ಸಂಗತಿ  ಬಯಲಾಗಿತ್ತು. ಇದರಿಂದ ಇಬ್ಬರಿಗೂ ಶಿಕ್ಷೆ ವಿಧಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: