ಸುದ್ದಿ ಸಂಕ್ಷಿಪ್ತ

ಈಡಿಗ ವಿದ್ಯಾರ್ಥಿನಿ ನಿಲಯಕ್ಕೆ ಅರ್ಜಿ ಆಹ್ವಾನ

ಬೆಂಗಳೂರು, ಆ.11: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘವು 2017–18ನೇ ಸಾಲಿನ ವಿದ್ಯಾರ್ಥಿನಿ ನಿಲಯಕ್ಕೆ ಅರ್ಜಿ ಆಹ್ವಾನಿಸಿದೆ. ಡಿಪ್ಲೋಮಾ, ತಾಂತ್ರಿಕ, ಸ್ನಾತಕೋತ್ತರ ಪದವಿ ಹಾಗೂ ಇತರೆ ಉನ್ನತ ಶಿಕ್ಷಣ ಪಡೆಯುತ್ತಿರುವ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿ ಪಡೆಯಲು ಆ.17 ಕೊನೆಯ ದಿನ ಹಾಗೂ ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಆ.24 ಕೊನೆಯ ದಿನವಾಗಿದೆ.  ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘ, ನಂ. 185, ಬಿಬಿಎಂಪಿ ಪಶ್ಚಿಮ ವಲಯ (ಮಲ್ಲೇಶ್ವರ) ಕಚೇರಿ ಎದುರು ರಾಜೀವ್ ಗಾಂಧೀ ವೃತ್ತ, ಶೇಷಾದ್ರಿಪುರ, ಬೆಂಗಳೂರು ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.(ವರದಿ: ಎಲ್.ಜಿ)

Leave a Reply

comments

Related Articles

error: