ಕರ್ನಾಟಕಪ್ರಮುಖ ಸುದ್ದಿ

ವಿಧಾನಸೌಧದ ಆವರಣದಲ್ಲಿ 2.5 ಕೋಟಿ ರೂ. ನಗದು ಜಪ್ತಿ

ಕೆಂಗಲ್‌ ಹನುಮಂತಯ್ಯ ದ್ವಾರದ ಮೂಲಕ ವಿಧಾನಸೌಧದ ಆವರಣ ಪ್ರವೇಶಿಸಲು ಮುಂದಾದ ವೋಕ್ಸ್-ವ್ಯಾಗನ್‌ ಕಾರನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದಾಗ ದೊಡ್ಡ ಮೊತ್ತದ ನಗದು ಹಣ ಪತ್ತೆಯಾಗಿ ವಶಕ್ಕೆ ಪಡೆಯಲಾಗಿದೆ.

ಮಧ್ಯಾಹ್ನ 2.30ಕ್ಕೆ ಬಂದ ಕಾರಿನಲ್ಲಿ ಮೂರು ಬಾಕ್ಸ್ ಗಳಲ್ಲಿ ಅನುಮಾನಾಸ್ಪದವಾಗಿ 2.5 ಕೋಟಿ ಹಣಕ್ಕೆ ಹಣವನ್ನಿರಿಸಲಾಗಿತ್ತು. ಕಾರಿನ ಮಾಲಿಕ ಧಾರವಾಡ ಮೂಲ ವಕೀಲ ಸಿದ್ದಾರ್ಥ್ ಅವರನ್ನು ವಶಕ್ಕೆ ಪಡೆದು, ಡಿಸಿಪಿ ಕಚೇರಿಯಲ್ಲಿ ಭದ್ರತಾ ಡಿಸಿಪಿ ಯೋಗೇಶ್, ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಟೇಲ್ ಅವರು ವಿಚಾರಣೆ ನಡೆಸಿದರು. ಲಂಚ ನೀಡಲು ಈ ಹಣ ತಂದಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.

Leave a Reply

comments

Related Articles

error: