ಕರ್ನಾಟಕ

ಸಾಲಬಾಧೆ : ನೇಣಿಗೆ ಶರಣಾದ ರೈತ

ರಾಜ್ಯ(ಬಾಗಲಕೋಟ)ಆ.11:-  ನೇಣು ಬಿಗಿದುಕೊಂಡು ರೈತರೋರ್ವರು  ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಪಿ.ಎಮ್.ಬುದ್ನಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಶಿವಪ್ಪ ಗುಡಿ (45)ಎಂದು ಗುರುತಿಸಲಾಗಿದೆ. ಇವರು ಜಮೀನಿನ ಕೆಲಸಕ್ಕಾಗಿ ಅಂದಾಜು ಹದಿನೆಂಟು ಲಕ್ಷ ರೂಪಾಯಿ ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲ ಮರುಪಾವತಿಸಲಾಗದೇ ಮನನೊಂದು ಸ್ವಂತ ಹೊಲದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: