ಮೈಸೂರು

ಬಿಜೆಪಿ ಮಹಿಳಾ ಮೋರ್ಚಾ : ಮಾಧ್ಯಮದವರೊಂದಿಗೆ ರಕ್ಷಾ ಬಂಧನ ಆಚರಣೆ

ಮೈಸೂರು,ಆ.11 : ನರಸಿಂಹ ರಾಜ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಇಂದು ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದರು.

ಮಹಿಳಾ ಘಟಕದ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ಮಾತನಾಡಿ ಸೋದರರ ಯಶಸ್ಸು, ಶ್ರೇಯಸ್ಸು ಹಾಗೂ ಧೀರ್ಘಾಯುಷು ಲಭಿಸಲೆನ್ನುವ ಸಂಕಲ್ಪದಿಂದ ಕಟ್ಟುವ ರಕ್ಷಾ ಬಂಧನ ದಾರವು ಅತ್ಯಂತ ಮಹತ್ವಪೂರ್ಣವಾಗಿದೆ, ಅದರಂತೆ ಸಮಾಜದ ಪಿಡುಗುಗಳಿಗೆ ಅವಿರತ ಸೇವೆ ಸಲ್ಲಿಸುವ ಸಂವಿಧಾನದ ನಾಲ್ಕನೆ ಸ್ತಂಭವಾದ ಮಾಧ್ಯಮದವರೊಂದಿಗೆ ಆಚರಿಸುತ್ತಿರುವುದು ಅತ್ಯಂತ ಸಂತಸ ತಂದಿದೆ, ಮಾಧ್ಯಮವು ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಮುಂದಾಗಬೇಕೆಂದು ಆಶಿಸಿದರು.

ಮಾಧ್ಯಮದವರಿಗೆ ರಕ್ಷಾ ಬಂಧನ ಕಟ್ಟಿ, ಸಿಹಿ ಹಂಚಿ ಸಂಭ್ರಮಿಸಿದರು.

ಉಪಮೇಯರ್ ರತ್ನ ಲಕ್ಷ್ಮಣ್, ಎನ್ ಆರ್ ಕ್ಷೇತ್ರದ ಅಧ್ಯಕ್ಷೆ ರೇಣುಕಾ ನಾಗರಾಜು, ನಗರ ಉಪಾಧ್ಯಕ್ಷೆ ಟಿ.ಶಾಂತ ಹಾಗೂ ಕಾರ್ಯಕರ್ತರು ಸಂದರ್ಭದಲ್ಲಿ ಭಾಗಿಯಾಗಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: