ಮೈಸೂರು

ಆ.12 ರಿಂದ 14ರವರೆಗೆ ಛಾಯಾಚಿತ್ರ ಹಾಗೂ ವರ್ಣಚಿತ್ರ ಪ್ರದರ್ಶನ

ಮೈಸೂರು,ಆ.11 : ಕಲಾವಿದ ದಂಪತಿ ಲಲಿತಾ ರ.ಪುಟ್ಟಿ ಮತ್ತು ರಘೋತ್ತಮ ಪುಟ್ಟಿ ಸ್ಮರಣಾರ್ಥ ಛಾಯಾಚಿತ್ರ ಹಾಗೂ ವರ್ಣ ಚಿತ್ರ ಪ್ರದರ್ಶನವನ್ನು ಆ.12ರಂದು ಕಲಾಮಂದಿರದ ಸುಚಿತ್ರಾ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ ಎಂದು ಕಲಾವಿದೆ ಮಾನಸ ಪುಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶನಿವಾರ ಸಂಜೆ 4ಕ್ಕೆ ಪುದುಚೆರಿ ಮತ್ತು ಬಿ.ಎಸ್. ಅಬ್ದುರ್ ರೆಹಮಾನ್ ಕ್ರೆಸೆಂಟ್ ವಿವಿಯ ವಿಶ್ರಾಂತ ಕುಲಪತಿ ಜೆ.ಎ.ಕೆ.ತರೀನ್ ಉದ್ಘಾಟಿಸುವರು. ಭ್ರಮರ ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಕಿ ಮಾಧುರಿ ತಾತಾಚಾರಿ ಅಧ್ಯಕ್ಷತೆ ವಹಿಸುವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ಉಪಸ್ಥಿತರಿರುವರು ಎಂದು ಹೇಳಿದರು.

ಕಲಾವಿದ ಅರುಣ್ ಸೆರೆ ಹಿಡಿದಿರುವ ಛಾಯಾಚಿತ್ರಗಳ ಮತ್ತು ನಾನು ರಚಿಸಿರುವ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗುವುದು, ಆ.14ರವರೆಗೆ ಪ್ರತಿ ದಿನ ಬೆಳಗ್ಗೆ 10 ರಿಂದ ಸಂಜೆ 7.30ರವರೆಗೆ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು

ಶ್ರೀನಿವಾಸ ಪುಟ್ಟ, ಎಂ.ಸಿ.ಸ್ವಾಮಿ, ಛಾಯಾಗ್ರಾಹಕ ಅರುಣ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: