ಪ್ರಮುಖ ಸುದ್ದಿ

ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಬೃಹತ್ ಬಂಕರ್

ಪ್ರಮುಖ ಸುದ್ದಿ, ವಾಷಿಂಗ್ಟನ್, ಆ.11: ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ ನೆರೆರಾಷ್ಟ್ರ ಪಾಕಿಸ್ತಾನ ಸದ್ದಿಲ್ಲದೆ ಬಲೂಚಿಸ್ತಾನದಲ್ಲಿ ರಹಸ್ಯವಾಗಿ ಅಣ್ವಸ್ತ್ರ ಗೋದಾಮು ಹಾಗೂ ಬೃಹತ್ ಬಂಕರ್ ನಿರ್ಮಾಣ ಮಾಡಿದೆ ಎಂಬ ಆತಂಕಕಾರಿ ಅಂಶವನ್ನು ಅಮೆರಿಕ ತಜ್ಞರು ಹೊರಹಾಕಿದ್ದಾರೆ.

ಅಮೆರಿಕದ ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ಭದ್ರತಾ ಸ್ವತಂತ್ರ ಸಂಸ್ಥೆಯ ತಜ್ಞರು ಇಂತಹುದೊಂದು ಸ್ಫೋಟಕ ಮಾಹಿತಿ ಹೊರಹಾಕಿದ್ದು, ಈಗಾಗಲೇ ಈ ಬೃಹತ್ ಬಂಕರ್ನಲ್ಲಿ ಪಾಕಿಸ್ತಾನ ಸೇನೆ ಅತ್ಯಾಧುನಿಕ ಕ್ಷಿಪಣಿಗಳನ್ನು  ಮತ್ತು ಅಣ್ವಸ್ತ್ರಗಳನ್ನು ಅಡಗಿಸಿಟ್ಟಿದೆ ಎಂದು ಅವರು ಹೇಳಿದ್ದಾರೆ.

ಸಂಸ್ಥೆಯ ತಜ್ಞ ಡೇವಿಡ್ ಆಲ್ಬ್ರೈಟ್, ಸಾರಾ ಬರ್ಕ್ಹಾರ್ಡ್, ಆಲಿಸನ್ ಲಾಚ್ ಮತ್ತು ಫ್ರಾಂಕ್ ಪ್ಯಾಬಿಯನ್ ಹೇಳುವಂತೆ ಈ ವರೆಗೂ ಪಾಕಿಸ್ತಾನ ತನ್ನ  ಈ ರಹಸ್ಯ ಬಂಕರ್ ಕುರಿತಂತೆ ವಿಶ್ವ ಸಮುದಾಯಕ್ಕೆ ಮಾಹಿತಿ ನೀಡಿಲ್ಲ. ಆದರೆ ರಹಸ್ಯವಾಗಿ ಅಲ್ಲಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದ್ದು, ಕ್ಷಿಪಣಿಗಳ ಮತ್ತು ಅಣ್ವಸ್ತ್ರಗಳ ಗೋದಾಮುಗಳಾಗಿ ಇದನ್ನು ಬಳಕೆ ಮಾಡಲಾಗುತ್ತಿದೆ. ಈ ಬೃಹತ್ ಬಂಕರ್ ನಿರ್ಮಾಣದ ಹಿಂದಿರುವ ಪಾಕಿಸ್ತಾನದ ಉದ್ದೇಶ ಬಹಿರಂಗವಾಗಿಲ್ಲವಾದರೂ, ಭದ್ರತಾ ದೃಷ್ಟಿಯಿಂದ ತನ್ನ ನೆರೆಹೊರೆಯ ರಾಷ್ಟ್ರಗಳ ಸಂಭಾವ್ಯದಾಳಿಗಳಿಂದ ರಕ್ಷಣೆ ಪಡೆಯಲು ಈ ಬಂಕರ್ ನಿರ್ಮಾಣ  ಮಾಡಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: