ಸುದ್ದಿ ಸಂಕ್ಷಿಪ್ತ

ಆ.12ರಂದು ನಾಡಪ್ರಭು ಕೆಂಪೇಗೌಡ ಸ್ಮರಣೆ

ಮೈಸೂರು,ಆ.11 : ಕರ್ನಾಟಕ ಸೇನಾ ಪಡೆಯಿಂದ ನಾಡಪ್ರಭು ಕೆಂಪೇಗೌಡರ ಸ್ಮರಣೆಯನ್ನು ಆ.12ರ ಬೆಳಗ್ಗೆ 11.30ಕ್ಕೆ ಜೆ.ಎಲ್.ಬಿ.ರಸ್ತೆಯ ರೋಟರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಡಾ.ಭಾಷ್ಯಂ ಸ್ವಾಮೀಜಿ ಸಾನಿಧ್ಯ ವಹಿಸುವರು, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಉದ್ಘಾಟಿಸುವರು, ಶಾಸಕ ವಾಸು ಅಧ್ಯಕ್ಷತೆ ವಹಿಸುವರು. ಹರೀಶ್ ಗೌಡ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸುವರು, ಕರ್ನಾಟಕ ಬ್ರಾಹ್ಮಣ ಮಹಾಸಭಾ ವಲಯ ಉಪಾಧ್ಯಕ್ಷ ಬಿ.ಆರ್.ನಟರಾಜ್ ಜೋಯ್ಸ್ ಪ್ರತಿಭಾ ಪುರಸ್ಕಾರ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಸಾಹಿತಿ ಬನ್ನೂರು ಕೆ.ರಾಜು ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: