ಪ್ರಮುಖ ಸುದ್ದಿಮೈಸೂರು

ಟಿ.ಎ.ಎಸ್ ಮಣಿ : ಜೆಎಸ್ಎಸ್ ಸಂಗೀತ ಸಮ್ಮೇಳನಾಧ್ಯಕ್ಷ

tasmaniಮೈಸೂರಿನ ಜೆಎಸ್ಎಸ್ ಸಂಗೀತ ಸಭಾ ಟ್ರಸ್ಟ್ ನಡೆಸುವ 23ನೇ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಮೃದಂಗ ವಿದ್ವಾನ್ ಟಿ.ಎ.ಎಸ್.ಮಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಗೀತ ಸಭಾ ಕಾರ್ಯದರ್ಶಿ ಪ್ರೊ.ಕೆ.ರಾಮಮೂರ್ತಿ ರಾವ್ ತಿಳಿಸಿದ್ದಾರೆ.

ಸಮ್ಮೇಳನವನ್ನು ಸುತ್ತೂರುಮಠದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಶತಮಾನೋತ್ಸವ ಸ್ಮರಣಾರ್ಥ ಡಿ.2 ರಿಂದ 6ರವರೆಗೆ ಸರಸ್ವತಿಪುರಂ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ಆವರಣದಲ್ಲಿರುವ ನವಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಪರಿಚಯ : ಟಿ.ಎ.ಎಸ್. ಮಣಿ ಅವರದು ಸಂಗೀತ ಮನೆತನ, ವಿದ್ವಾನ್ ಪಾಲ್ಗಾಟ್ ಸಿ.ಕೆ.ಅಯ್ಯಾಮಣಿ ಅಯ್ಯರ್ ಅವರ ಶಿಷ್ಯರಾಗಿ ಅವರ 10ನೇ ವಯಸ್ಸಿನಿಂದಲೇ ಕಲಾಸೇವೆ ಆರಂಭ, ಅಕಾಶವಾಣಿ ಮತ್ತು ದೂರದರ್ಶನದ ಎ ದರ್ಜೆ ಕಲಾವಿದರಾಗಿದ್ದಾರೆ.  ಕರ್ನಾಟಕ ಕಾಲೇಜ್ ಆಫ್ ಪರ್ಕ್ಯೂಷನ್ ಸಂಸ್ಥೆ ಸ್ಥಾಪಿಸಿ ಐದು ದಶಕಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಮೃದಂಗ ತರಬೇತಿ ನೀಡುತ್ತಿದ್ದಾರೆ. ಇವರು, ವಿಶ್ವದಾದ್ಯಂತ ಸಂಗೀತ ಕಚೇರಿಗಳನ್ನು ನೀಡಿದ್ದು. ಚೆಂಬೈ ವೈದ್ಯನಾಥ ಭಾಗವತರು, ಡಾ.ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಡಾ.ಎಂ.ಎಸ್.ಸುಬ್ಬಲಕ್ಷ್ಮಿ, ಡಿ.ಕೆ.ಪಟ್ಟಮ್ಮಾಳ್, ಡಾ.ವಸಂತಕುಮಾರಿ, ಡಾ.ಬಾಲಮುರಳಿಕೃಷ್ಣ ಮುಂತಾದ ಸಂಗೀತ ದಿಗ್ಗಜರಿಗೆ ಮೃದಂಗದಲ್ಲಿ ಪಕ್ಕ ವಾದ್ಯ ನೀಡಿದ್ದಾರೆ.

 

Leave a Reply

comments

Related Articles

error: