ಪ್ರಮುಖ ಸುದ್ದಿ

ತಾಲೂಕು ಸಹಕಾರ ಕೃಷಿ, ಗ್ರಾಮೀಣಾಭಿವೃದ್ಧಿ ಬ್ಯಾಂಕಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

 

ಪ್ರಮುಖ ಸುದ್ದಿ, ತಿ.ನರಸೀಪುರ. ಆ.೧೧: ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿಗೆ ನೂತನ ಅಧ್ಯಕ್ಷರಾಗಿ ಮಾಡ್ರಳ್ಳಿ ಶಿವಮೂರ್ತಿ, ಉಪಾಧ್ಯಕ್ಷರಾಗಿ ನಾಗಮಣಿ ಆಯ್ಕೆಯಾದರು.

ವಜ್ರೇಗೌಡ ಹಾಗೂ ಶಿವಮೂರ್ತಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಸಲಾಯಿತು. ಪಟ್ಟಣದ ಪಿಕಾರ್ಡ್ ಬ್ಯಾಂಕಿನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾಡ್ರಳ್ಳಿ ಶಿವಮೂರ್ತಿ ಹಾಗೂ ಕೆಂಪಯ್ಯನಹುಂಡಿ ಮಹದೇವು ಉಪಾಧ್ಯಕ್ಷ ಸ್ಥಾನಕ್ಕೆ ನಾಗಮಣಿ ಹಾಗೂ ಬನ್ನೂರು ಪಾರ್ಥಸಾರಥಿ ಸ್ಪರ್ಥಿಸಿದ್ದರು. ಅಂತಿಮವಾಗಿ ಮಾಡ್ರಳ್ಳಿ ಶಿವಮೂರ್ತಿ ಹಾಗೂ ನಾಗಮಣಿ ತಲಾ 7 ಮತಗಳನ್ನು ಪಡೆದು ಆಯ್ಕೆಯಾದರು.

ಚುನಾವಣಾಧಿಕಾರಿಗಳಾಗಿ ಸಿ.ಪುಟ್ಟರಾಜು ಹಾಗೂ ರಮೇಶ್ ಚುನಾವಣಾ ಪ್ರಕ್ರಿಯೆ ನಡೆಸಿದರು ನಿರ್ದೇಶಕರಾದ ಲಿಂಗಪ್ಪಾಜಿ, ಎನ್.ಎಂ.ಮಹದೇವಸ್ವಾಮಿ, ರುದ್ರಸ್ವಾಮಿ, ಲಿಂಗರಾಜು. ಸಿದ್ದರಾಜು, ವಜ್ರೇಗೌಡ, ಗಂಗಮ್ಮ, ನಾರಾಯಣ, ಮಲ್ಲೇಗೌಡ, ಮುಖಂಡರಾದ ಕುರಬೂರು ಶಾಂತರಾಜು, ಹಿರಿಯೂರು ನವೀನ, ಎಂ.ಬಿ.ಸಾಗರ್, ಡೈರಿ ನಾಗೇಂದ್ರ, ಮಾಡ್ರಳ್ಳಿ ಮರಿಸ್ವಾಮಿ, ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: