ದೇಶಪ್ರಮುಖ ಸುದ್ದಿ

ಅಂತರ್ಜಾಲದಲ್ಲಿ ಸಿನಿಮಾ ಸೇವೆ ನೀಡುವ 2,650 ವೆಬ್‍ಸೈಟ್‍ಗಳಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ಚೆನ್ನೈ, ಆಗಸ್ಟ್ 11 : ಅಂತರ್ಜಾಲದ ಮೂಲಕ ಸಿನಿಮಾ ವೀಕ್ಷಣೆ ಮತ್ತು ಸಂಗ್ರಹಿಸಿಟ್ಟುಕೊಳ್ಳಬಹುದಾದ ಅವಕಾಶ ಒದಗಿಸುವ 2,650 ವೆಬ್‍ಸೈಟ್‍ಗಳಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ. ಇತ್ತೀಚಿನ ದಿನಗಳಲ್ಲಿ ಆನ್‍ಲೈನ್‍ನಲ್ಲಿ ಹಿಂದಿ ಸೇರಿದಂತೆ ಹಲವು ಭಾರತೀಯ ಸಿನಿಮಾಗಳ ಕದಿಯುವಿಕೆ ಹೆಚ್ಚಾಗಿರುವುದರಿಂದ ಹಕ್ಕುಸ್ವಾಮ್ಯದ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದಂತಾಗಿದೆ ಎಂಬ ವಾದಕ್ಕೆ ಮನ್ನಣೆ ನೀಡಿರುವ ನ್ಯಾಯಾಲಯವು ಈ ಮಧ್ಯಂತರ ಆದೇಶ ನೀಡಿದೆ.

ಹೊಸ ಚಿತ್ರಗಳು ಬಿಡುಗಡೆಯಾದ ತಕ್ಷಣವೇ ಅವುಗಳನ್ನು ಕದ್ದು ವಿಡಿಯೋಗಳನ್ನು ಆನ್‍ಲೈನ್ ಮಾರ್ಗವಾಗಿ ಪ್ರೇಕ್ಷಕರಿಗೆ ಅಕ್ರಮವಾಗಿ ತಲುಪಿಸುವ ದೊಡ್ಡ ದಂಧೆಯೇ ನಡೆಯುತ್ತಿದೆ. ಇಂತಹ ಚಟುವಟಿಕೆಗಳನ್ನು ಹತ್ತಿಕ್ಕಬೇಕು. ಈ ನಿಟ್ಟಿನಲ್ಲಿ ವಿತರಕರು ಮತ್ತು ಕಂಪನಿಗಳಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸುವಂತೆಯೂ ತಿಳಿಸಿದೆ. ಅಥವಾ ತಾಂತ್ರಿಕವಾಗಿ ಇಂತಹ ವೆಬ್‍ಸೈಟ್‍ಗಳಿಂದ ಸಿನಿಮಾಗಳನ್ನು ಕದಿಯಲು ಸಾಧ್ಯವಾಗದಂತೆ  ಲಾಗಿನ್‍ ಮತ್ತು ಡೌನ್‍ಲೋಡ್ ನಿಯಮಗಳಿಗೆ ನಿರ್ಬಂಧ ವಿಧಿಸುವಂತೆಯೂ ಹೈಕೋರ್ಟ್ ಸೂಚನೆ ನೀಡಿದೆ.

-ಎನ್.ಬಿ.

Leave a Reply

comments

Related Articles

error: