ಸುದ್ದಿ ಸಂಕ್ಷಿಪ್ತ

ಆ.13ರಂದು ಬಸವ-ಹಾನಗಲ್ ಕುಮಾರಸ್ವಾಮಿಗಳ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ

ಮೈಸೂರು, ಆ.11 : ಅಖಿಲ ಭಾರತ ವೀರಶೈವ ಮಹಾಸಭಾದಿಂದ ಬಸವ ಜಯಂತಿ ಮತ್ತು ಶ್ರೀಹಾನಗಲ್ ಕುಮಾರಸ್ವಾಮಿಗಳ 150ನೇ ಜಯಂತಿ, ಪ್ರತಿಭಾ ಪುರಸ್ಕಾರವನ್ನು ಆ.13ರ ಬೆಳಗ್ಗೆ 10ಕ್ಕೆ ಸರಸ್ವತಿಪುರಂನ ಜೆ.ಎಸ್.ಎಸ್. ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಉದ್ಘಾಟಿಸುವರು. ಗುರುಸ್ವಾಮಿ ಅಧ್ಯಕ್ಷತೆ ವಹಿಸುವರು. ಹೊಸಮಠದ ಶ್ರೀಚಿದಾನಂದಸ್ವಾಮಿ ಹಾಗೂ ರಾಯಚೂರಿ ಜಿಲ್ಲೆಯ ಕಲ್ಲುಮಠದ ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸಾನಿಧ್ಯ ವಹಿಸುವರು.

ಮುಖ್ಯ ಅತಿಥಿಗಳಾಗಿ ಚಾಮರಾಜನಗರ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಡೀನ್ ಡಾ.ಟಿ.ಎನ್. ಚಂದ್ರಶೇಖರ್, ಉಪ ಪೊಲೀಸ್ ಕಮಿಷನರ್ ಪ್ರೊ.ಮಲೆಯೂರು ಗುರುಸ್ವಾಮಿ, ಸಮಾಜದ ಮುಖಂಡರಾದ ರೇಣುಕ ಪ್ರಸನ್ನ, ಹೆಚ್.ವಿ.ಬಸವರಾಜು ರಾಜೇಶ್ವರಿ ಮಹೇಶ್ ಮೊದಲಾದವರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: