ಮೈಸೂರು

ಆಹಾರವನ್ನೇ ಔಷಧವಾಗಿಸುವ ಸಂಶೋಧನೆ ಅಗತ್ಯ: ಪ್ರೊ. ರಾಮ ರಾಜಶೇಖರನ್

ರೋಗಗಳು ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ ಆಹಾರವೇ ಔಷಧಿಯಾಗಿ ಬಳಕೆಯಾಗಬೇಕಾದ ಅವಶ್ಯಕತೆಯಿದೆ ಎಂದು ಸಿಎಫ್‍ಟಿಆರ್‍ಐ ನಿರ್ದೇಶಕ ಪ್ರೊ. ರಾಮ ರಾಜಶೇಖರನ್ ಹೇಳಿದರು.

ಸಿಎಫ್‍ಟಿಆರ್‍ಐ ಆವರಣದಲ್ಲಿ ಶುಕ್ರವಾರ ನಡೆದ ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಆಹಾರ ಕ್ಷೇತ್ರದಲ್ಲಿಂದು ಸಾಕಷ್ಟು ಸಂಶೋಧನೆಗಳು ಆಗಬೇಕಿದೆ. ಸಿಎಫ್‍ಟಿಆರ್‍ಐ ಮುಂದಿನ ಒಂದು ವರ್ಷದಲ್ಲಿ 2 ಪ್ರಬೇಧದ ಆಹಾರ ತಳಿಗಳನ್ನು ಪರಿಚಯಿಸಲಿದೆ. ಮುಂದಿನ ವರ್ಷ ಖಾದ್ಯ ತೈಲವೊದನ್ನು ಪರಿಚಯಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ, ರೈತರಿಗೆ ಪ್ರಯೋಜನವಾಗಲಿದೆ ಎಂದರು.

ರೋಗಗಳಿಗೆ ಬಳಕೆಯಾಗುವ ಔಷಧಗಳು ದೇಹದ ಮೇಲೆ ಹಲವು ಪರಿಣಾಮಗಳನ್ನು ಬೀರುತ್ತವೆ. ಈ ಹಿನ್ನೆಲೆಯಲ್ಲಿ ಔಷಧಗಳ ವಿಷಯುಕ್ತ ಅಂಶಗಳು ಕಡಿಮೆ ಆಗುವ ಜೊತೆಗೆ ಆಹಾರವೇ ಔಷಧವಾಗಿ ಬಳಕೆಯಾಗುವ ಸಂಶೋಧನೆ ಆಗಬೇಕಿದೆ ಎಂದು ಹೇಳಿದರು.
ಆಹಾರದ ಕೊರತೆ ಒಂದೆಡೆಯಾದರೆ, ಪೌಷ್ಟಿಕ ಆಹಾರದ ಕೊರತೆಯ ಸಮಸ್ಯೆಯನ್ನು ನಮ್ಮ ದೇಶ ಎದುರಿಸುತ್ತಿದೆ. ಈ ಬಗ್ಗೆ ಗಮನಹರಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ತೋರಿದ ವಿಜ್ಞಾನಿಗಳಿಗೆ ಪ್ರಶಸ್ತಿ ನೀಡಲಾಯಿತು. ವಿಜ್ಞಾನಿ ಡಾ. ಎನ್.ಎಂ. ಸಚ್ಚೀಂದ್ರ, ಆಡಳಿತ ನಿಯಂತ್ರಕ ಬಿನೋದ್ ದುಬೆ ಇದ್ದರು.

Leave a Reply

comments

Related Articles

error: