ಸುದ್ದಿ ಸಂಕ್ಷಿಪ್ತ

ಆ.12 ರಂದು ಕೊಡವ-ಕೊಡವ ಭಾಷಿಗರ ಸಮಗ್ರ ದಾಖಲೀಕರಣ ಬಿಡುಗಡೆ ಕಾರ್ಯಕ್ರಮ

ಮಡಿಕೇರಿ, ಆ.11: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕೊಡವ ಸಮಾಜ ಇವರ ವತಿಯಿಂದ ಆಗಸ್ಟ್, 12 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಕೊಡವ ಸಮಾಜದಲ್ಲಿ ಕೊಡಗರ ಕಾಳಿದಾಸ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಫೆಲೋಶಿಪ್ ಕೃತಿಯ ಮತ್ತು ಕೊಡವ-ಕೊಡವ ಭಾಷಿಗರ ಸಮಗ್ರ ದಾಖಲೀಕರಣ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಕೊಡವ ಜಾನಪದ ತಜ್ಞ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಾಚರಣಿಯಂಡ ಅಪ್ಪಣ್ಣ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿದ್ದಾಟಂಡ ಎಸ್.ತಮ್ಮಯ್ಯ, ಮಂಗಳೂರು ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ರಿಜಿಸ್ಟ್ರಾರ್ ಮತ್ತು ಸಂಯೋಜಕರಾದ ಡಾ.ಕೋಡಿರ ಲೋಕೇಶ್, ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಇತರರು ಪಾಲ್ಗೊಳ್ಳಲಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: