ಸುದ್ದಿ ಸಂಕ್ಷಿಪ್ತ
ಆ.13 ರಂದು ಕಸಾಪ ವತಿಯಿಂದ ರಂಗ ನಂದನ ಕಾರ್ಯಕ್ರಮ
ಮಡಿಕೇರಿ, ಆ.11: ವಿದ್ಯಾರ್ಥಿ ದೆಸೆಯಿಂದಲೇ ರಂಗಭೂಮಿ ಹಾಗು ರಂಗ ಸಾಹಿತ್ಯದ ಬಗ್ಗೆ ಅರಿವು ಕಾರ್ಯಕ್ರಮ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ವಿಸ್ತಾರಗೊಳ್ಳುತ್ತಿದ್ದು, ಯುವ ಜನತೆಯು ಪೂರ್ವಿಕರ ಸಾಮಾಜಮುಖಿಯಾಗಿದ್ದ ಮೌಲ್ಯವರ್ಧಿತ ರಂಗಭೂಮಿ ಮರೆಯುತ್ತಿರುವುದರೊಂದಿಗೆ ರಂಗಸಾಹಿತ್ಯದ ಅರಿವು ಇಲ್ಲದಂತಾಗಿದೆ. ಪ್ರಸ್ತುತ ಸಮಯದಲ್ಲಿ ಯುವ ಪೀಳಿಗೆಗೆ ಬಾಲ್ಯದಿಂದಲೆ ರಂಗಭೂಮಿ ಹಾಗೂ ರಂಗಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಅನಿವಾರ್ಯವಾಗಿದೆ.
ಇದಕ್ಕೆ ಪೂರಕವಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ಹೋಬಳಿ ಘಟಕದ ಜಂಟಿ ಆಶ್ರಯದಲ್ಲಿ ಆಗಸ್ಟ್, 13 ರಂದು ಬೆಳಗ್ಗೆ 10.30 ಗಂಟೆಗೆ ಕೂಡಿಗೆಯ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ರಂಗಭೂಮಿ ಹಾಗೂ ರಂಗಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ರಂಗನಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನುರಿತ ಕಲಾವಿದರಿಂದ ತರಬೇತಿ ಕಾರ್ಯಗಾರವನ್ನು ಏರ್ಪಡಿಸಿದೆ. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ನವಚೇತನ ಕಲಾನಿಕೇತನ ಕಲಾವಿದರ ತಂಡವು ಏಕಲವ್ಯ ಮತ್ತು ಶ್ರೀರಾಮಪಾದುಕ ಪಟ್ಟಾಭಿಷೇಕ ಎಂಬ ಎರಡು ಪೌರಾಣಿಕ ನಾಟಕಗಳನ್ನು ಪ್ರದರ್ಶಿಸಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ಹಾಗು ಕಲಾ ಆಸಕ್ತರು ಶಿಬಿರಕ್ಕೆ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8277066123 ಸಂಪರ್ಕಿಸಲು ತಿಳಿಸಲಾಗಿದೆ. (ವರದಿ: ಕೆಸಿಐ, ಎಲ್.ಜಿ)