ಕರ್ನಾಟಕಮೈಸೂರು

ಅ.22-23: ಸಾರ್ಥಕ ಸಂಭ್ರಮಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮ

ಭಾರತೀಯ ಗ್ರಾಮೀಣ ಶೈಕ್ಷಣಿಕ ಅಭಿವೃದ್ಧಿ ಹಾಗೂ ಆವಿಷ್ಕಾರಿ ತಂತ್ರಜ್ಞಾನ ಕೇಂದ್ರ ಮೈಸೂರು ಇವರ ವತಿಯಿಂದ ಅಖಿಲ ಕರ್ನಾಟಕ 10ನೇ ವರ್ಷದ ಸಾರ್ಥಕ ಸೇವೆಯ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಅ.22 ರಂದು ಬೆಳಗ್ಗೆ 10 ಗಂಟೆಗೆ ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ರೋಟರಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಇದೇ ವೇಳೆ ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ಇವರ ಸಹಯೋಗದಲ್ಲಿ ಮೈಸೂರು ವಿವಿ ಮಟ್ಟದ ಜಾನಪದ ಗೀತೆಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಾರ್ಯಕಮವು ಮೇಲುಕೋಟೆಯ ವಂಗೀಪುರ ಮಠದ ಸ್ವಾಮೀಜಿ ಇಳೈ ಆಳ್ವಾರ್ ಉಪಸ್ಥಿತಿಯಲ್ಲಿ ನಡೆಯಲಿದ್ದು, ಉದ್ಘಾಟನೆಯನ್ನ ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಟಿ. ಮಹದೇವಸ್ವಾಮಿಯವರು ನೇರವೇರಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಕೆ. ರಘುರಾಂ, ಜೀನಿಯಸ್ ಕಾಲೇಜಿನ ಪ್ರಾಂಶುಪಾಲರಾದ ಸುರೇಖಪ್ರಭು ಆಗಮಿಸಿಲಿದ್ದಾರೆ. ಈ ಸಂದರ್ಭ ರಾ.ಸೇ.ಯೋ. ಗೆಳೆಯರ ಬಳಗದ ವತಿಯಿಂದ ಎನ್.ಎಸ್.ಎಸ್. ಭೀಷ್ಮ ಎಂದೇ ಪ್ರಖ್ಯಾತಿ ಹೊಂದಿರುವ ಪ್ರೊ. ಬಿ.ಕೆ. ಶಿವಣ್ಣ ಅವರಿಗೆ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅ.23 ರಂದು ಬೆಳಗ್ಗೆ 10 ಗಂಟೆಗೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಭಾರತೀಯ ಗ್ರಾಮೀಣ ಶೈಕ್ಷಣಿಕ ಅಭಿವೃದ್ಧಿ ಹಾಗೂ ಆವಿಷ್ಕಾರಿ ತಂತ್ರಜ್ಞಾನ ಕೇಂದ್ರ ಮೈಸೂರು ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಷರಿಷತ್ತು ಮೈಸೂರು ಇವರ ಸಹಯೋಗದಲ್ಲಿ ‘ಆರೋಗ್ಯಕರ ಸಮಾಜ – ಬದಲಾಗುತ್ತಿರುವ ಮೌಲ್ಯಗಳು ವಿಚಾರ ಸಂಕಿರಣವನ್ನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಹಲವು ವಿಷಯಗಳ ಬಗ್ಗೆ ವಿಚಾರ ಮಂಡನೆ ನಡಯಲಿದೆ. ಶಾರದ ವಿಲಾಸ ಬಿಎಡ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎಚ್.ಎನ್. ಉಮೇಶ್ ಅವರು ಪಾರಂಪರಿಕ ಮೌಲ್ಯಗಳ ಬಗ್ಗೆ ವಿಷಯ ಮಂಡಿಸಲಿದ್ದಾರೆ. ಎರಡನೆಯದಾಗಿ ಮೈಸೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎನ್. ಬೋರಲಿಂಗಯ್ಯ ಆಧುನಿಕ ಜೀವನ ಮಾರ್ಗ ಹಾಗೂ ಮೌಲ್ಯಗಳ ಸಂಘರ್ಷದ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ವೈ.ಡಿ. ರಾಜಣ್ಣ ಭಾಗವಹಿಸಲಿದ್ದು, ಹಿರಿಯ ಹಾಗೂ ನಿವೃತ್ತ ಪ್ರಾಧ್ಯಾಪಕರು ಸೇರಿದಂತೆ ಆಲ್ ಇಂಡಿಯಾ ರಿಸರ್ಚರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಕುಶಾಲ್ ಬರಗೂರು ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಲಿದ್ದಾರೆ.

ಸಂಜೆ 4 ಗಂಟೆಗೆ ನಾಲ್ಕು ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಹಾಗೂ 2016ರ ಕರ್ನಾಟಕದ ಕಣ್ಮಣಿ ರಾಜ್ಯಪ್ರಶಸ್ತಿ ಪ್ರದಾನ ಸಮಾರಂಭವನ್ನ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬೇಬಿ ಮಠದ ಚಂದ್ರವನ ಆಶ್ರಮದ ಶ್ರೀ. ತ್ರಿನೇತ್ರ ಮಹಾಂತ ಶಿವಯೋಗಿಸ್ವಾಮಿಗಳು ವಹಿಸುವರು. ಚಾಮರಾಜನಗರ ಸಂಸದರಾದ ಆರ್. ಧ್ರುವನಾರಾಯಣ ಅವರು ನೂತನ ಅಭಿವೃದ್ಧಿಪರ ಯೋಜನೆಗಳನ್ನ ಲೋಕಾರ್ಪಣೆ ಮಾಡುವರು. 2016ರ ಕರ್ನಾಟಕ ಕಣ್ಮಣಿ ರಾಜ್ಯ ಪ್ರಶಸ್ತಿಯನ್ನ ಗ್ರಾಮೀಣ ಹಿನ್ನಲೆಯ ಅಸಾಧಾರಣ ಪ್ರತಿಭೆಗಳಿಗೆ ಮೈಸೂರು ಕೊಡಗು ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹ ಅವರು ಪ್ರದಾನ ಮಾಡುವರು. ಕಾರ್ಯಕ್ರಮವನ್ನ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಿ. ರಂದೀಪ್ ಅವರು ಉದ್ಘಾಟನೆ ಮಾಡಲಿದ್ದು, ವರ್ಕ್ಸ್ ಜೆ.ಕೆ. ಟೈರ್ ಅಂಡ್ ಇಂಡಸ್ಟ್ರೀಸ್ ಲಿ. ಮೈಸೂರು ಉಪಾಧ್ಯಕ್ಷರಾದ ಉಮೇಶ್  ಕೆ. ಶೈಣೈ ಅವರು ಅತ್ಯುತ್ತಮ ಸ್ವಸಹಾಯ ಸಂಘಗಳಿಗೆ ಪುರಾಸ್ಕಾರ ಮಾಡಲಿದ್ದಾರೆ.

ಈ ಬಾರಿ ಕರ್ನಾಟಕ ಕಣ್ಮಣಿ ಪ್ರಶಸ್ತಿಯನ್ನ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ ಹಾಕಿ ಆಟಗಾರ ಕೊಡಗಿನ ರಘುನಾಥ್  ವಿ.ಆರ್. ಅವರಿಗೆ ನೀಡಲಾಗುತ್ತಿದೆ.

Leave a Reply

comments

Related Articles

error: