ಸುದ್ದಿ ಸಂಕ್ಷಿಪ್ತ

ಆ.13 ರಂದು ಜಿಲ್ಲಾ ಮಟ್ಟದ ಈಜು ಸ್ಪರ್ಧೆ

ಮಡಿಕೇರಿ ಆ.11: 2017ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಂಗವಾಗಿ ಇಲಾಖಾ ವತಿಯಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೊಡಗು ಜಿಲ್ಲಾ ಮಟ್ಟದ ಈಜು ಸ್ಪರ್ಧೆಯನ್ನು ಆಗಸ್ಟ್, 13 ರಂದು ಬೆಳಗ್ಗೆ 10 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಏರ್ಪಡಿಸಲಾಗಿದೆ.

14 ವರ್ಷ ಒಳಪಟ್ಟ (ಬಾಲಕ/ಬಾಲಕಿಯರಿಗೆ) 50 ಮೀ. ಫ್ರೀ ಸ್ಟೈಲ್ ಹಾಗೂ 50 ಮೀ. ಐ.ಎಂ., 15 ವರ್ಷದಿಂದ 18 ವರ್ಷ ಒಳಪಟ್ಟ (ಬಾಲಕ/ಬಾಲಕಿಯರಿಗೆ)-50 ಮೀ.ಫ್ರೀ ಸ್ಟೈಲ್ ಹಾಗೂ 50 ಮೀ. ಐ.ಎಂ. ಹಾಗೂ ಸಾರ್ವಜನಿಕರಿಗೆ (ಪುರುಷರಿಗೆ ಮತ್ತು ಮಹಿಳೆಯರಿಗೆ)-ಫ್ರೀ ಸ್ಟೈಲ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ  ಭಾಗವಹಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: