ಮೈಸೂರು

ಹಠಾತ್ತನೆ ನೆಲಕ್ಕುರುಳಿದ ಮರ

ಮೈಸೂರಿನಲ್ಲಿ ಶುಕ್ರವಾರದಂದು ಬೃಹತ್ ಗಾತ್ರದ ಮರವೊಂದು ಹಠಾತ್ತನೆ ನೆಲಕ್ಕುರಿಳಿದೆ. ರಮಾವಿಲಾಸ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಯಾವುದೇ ಅನಾಹುತ ನಡೆದಿಲ್ಲ.

ಘಟನೆಯಲ್ಲಿ ಈಟಿವಿ ಸಿಬ್ಬಂದಿ ಚಂದ್ರು ಎಂಬವರ ಬೈಕ್ ಜಖಂಗೊಂಡಿದ್ದು, ಬೈಕ್ ನಿಲ್ಲಿಸಿದ್ದ 10 ನಿಮಿಷದ ಅಂತರದಲ್ಲಿ ಮರ ನೆಲಕ್ಕುರುಳಿದೆ. ಘಟನೆಯಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ವಾಹನ ಸವಾರರು ಬದಲಿ ಮಾರ್ಗ ಅನುಸರಿಸಿದ್ದಾರೆ. ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

Leave a Reply

comments

Related Articles

error: