ಮೈಸೂರುಸುದ್ದಿ ಸಂಕ್ಷಿಪ್ತ

2015-16ನೇ ಸಾಲಿನ ಉತ್ತಮ ಪತ್ತಿನ ಸಹಕಾರ ಸಂಘ ಪ್ರಶಸ್ತಿ

ಮೈಸೂರು – ಚಾಮರಾಜನಗರ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ವತಿಯಿಂದ ನವರತ್ನ ದಿಗಂಬರ ಜೈನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ – ಇವರಿಗೆ ಉತ್ತಮ ಕಾರ್ಯನಿರ್ವಹಣೆ ಮಾಡಿದ ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಯ 2015-16ನೇ ಸಾಲಿನ ಉತ್ತಮ ಪತ್ತಿನ ಸಹಕಾರ ಸಂಘ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದೇ ಸೊಸೈಟಿಗೆ 2012 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದಲೂ ಉತ್ತಮ ಪತ್ತಿನ ಸಹಕಾರ ಸಂಘ ಪ್ರಶಸ್ತಿ ಬಂದಿದೆ. ಈ ಸಂಸ್ಥೆ ಪ್ರಾರಂಭವಾಗಿ 28 ವರ್ಷಗಳಾಗಿದ್ದು, ಈವರೆಗೂ ಇಲ್ಲಿ ಎರಡು ಸಾವಿರ ಮಂದಿ ಸದಸ್ಯರಾಗಿದ್ದಾರೆ. 2015-16ರಲ್ಲಿ ಕಾರ್ಯನಿರ್ವಹಿಸಿ 7.10 ಲಕ್ಷ ರೂಪಾಯಿ ಲಾಭ ಗಳಿಸಿದ್ದು, ಶೇಕಡಾ 11 ರಂತೆ ಡಿವಿಡೆಂಟ್ ನೀಡಿರುತ್ತದೆ.

Leave a Reply

comments

Related Articles

error: