
ಪ್ರಮುಖ ಸುದ್ದಿ
ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮ
ಪ್ರಮುಖ ಸುದ್ದಿ, ಬಿಳಿಗಿರಿರಂಗನಬೆಟ್ಟ, ಆ.೧೨: ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಸಾಧನ ಸಂಸ್ಥೆ, ಮಕ್ಕಳ ಸಹಾಯವಾಣಿ ಸಂಯುಕ್ತ ಆಶ್ರಯದಲ್ಲಿ ಬಿಳಿಗಿರಿರಂಗನಬೆಟ್ಟದ ವಿಜಿಕೆಕೆ ಶಾಲೆಯಲ್ಲಿ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಪುಟ್ಟಸ್ವಾಮಿ, ೧೯೮೬ರ ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಅನ್ವಯ ಬಾಲಕಾರ್ಮಿಕರೆಂದರೆ ಬಾಲ್ಯದಿಂದ ವಂಚಿತರಾಗಿ ಶಿಕ್ಷಣ ಪಡೆಯುವ ವಯಸ್ಸಿನಲ್ಲಿ ದುಡಿಯುವ ೧೪ ವರ್ಷದ ಒಳಗಿನ ಮಕ್ಕಳು, ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ. ಅಂತಹವರಿಗೆ ೧೦ ಸಾವಿರ ರೂ ದಂಡ ಹಾಗೂ ೬ ತಿಂಗಳ ಜೈಲು ಶಿಕ್ಷೆ ಇದೆ ಎಂದು ತಿಳಿಸಿದರು.
ಬಾಲಕಾರ್ಮಿಕ ಪದ್ದತಿ ಇಂದು ವಿಶ್ವದಾದ್ಯಂತ ಆವರಿಸಿರಿದೆ. ಒಂದು ಅನಿಷ್ಟ ಪದ್ದತಿ ಎಂದು ಹೇಳಬಹುದು ಅದುದರಿಂದ ನಾವುಗಳು ಈ ಅನಿಷ್ಟ ಪದ್ದತಿಯನ್ನು ಹೋಗಲಾಡಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಧನ ಸಂಸ್ಥಯ ನಿರ್ದೇಶಕ ಟಿ.ಜೆ.ಸುರೇಶ್, ಬಾಲಾಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ಧೇಶಕ ಮಹೇಶ್, ವಿಜಿಕೆಕೆ ಸಂಯೋಜಕ ಡಾ.ಅರುಣ್ ಕುಮಾರ್, ಮಕ್ಕಳ ರಕ್ಷಣಾ ಘಟಕದ ಅದಿಕಾರಿ ಕುಮಾರ್, ಮುಖ್ಯೋಪಧ್ಯಾಯ ರಾಮಾಚಾರಿ, ಸಾಧನ ಸಂಸ್ಥೆಯ ಮಕ್ಕಳ ಸಹಾಯವಾಣಿಯ ವಂಸತ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)