ಮೈಸೂರುಸುದ್ದಿ ಸಂಕ್ಷಿಪ್ತ

ಟಿಪ್ಪು ಜಯಂತಿ ಕುರಿತು ವಿಚಾರ ಸಂಕಿರಣ

“ಟಿಪ್ಪು ಜಯಂತಿ ಬೇಕೆ?” ಎಂಬ ವಿಚಾರಗೋಷ್ಠಿಯನ್ನು ಮಂಥನ ಮೈಸೂರು ಲೇಖಕ-ಚಿಂತಕರ ಬಳಗದ ವತಿಯಿಂದ ಮೈಸೂರಿನ ಶಾರದ ವಿಲಾಸ ಕಾಲೇಜಿನಲ್ಲಿ ಅ.22ರ ಸಂಜೆ ಆಯೋಜಿಸಲಾಗಿದೆ. ನಿನಾಸಂ ಕಲಾವಿದರು ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಅದ್ದಂಡ ಕಾರ್ಯಪ್ಪ ಹಾಗೂ ಮಂಗಳೂರಿನ ಸಾಮಾಜಿಕ ಮತ್ತು ರಾಜಕೀಯ ವಿಶ್ಲೇಷಕರಾದ ರಾಬರ್ಟ್ ರೊಸಾರಿಯೋ ಅವರು ವಿಚಾರ ಮಂಡಿಸಲಿದ್ದಾರೆ. ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಕೀಲರಾದ ಪಿ.ಡಿ. ಮೇದಪ್ಪ ವಹಿಸಲಿದ್ದಾರೆ ಎಂದು ಈ ಸಂಸ್ಥೆಯ ಅಧ್ಯಕ್ಷರಾದ ಎ.ಎಸ್. ನಾಗರಾಜ್ ಹಾಗೂ ಸಂಚಾಲಕರಾದ ಮಲ್ಲೇರಾಜ್ ಅರಸ್ ತಿಳಿಸಿದ್ದಾರೆ.

Leave a Reply

comments

Related Articles

error: