ಸುದ್ದಿ ಸಂಕ್ಷಿಪ್ತ

ಉಚಿತ ಸಾರ್ವಜನಿಕ ಗ್ರಂಥಾಲಯ ನಡೆಸುತ್ತಿರುವ ಸೈಯದ್ ಇಶಾಕ್ ಗೆ ಸನ್ಮಾನ

ಮೈಸೂರು,ಆ.12 : ನಗರದಲ್ಲಿ ಉಚಿತ ಸಾರ್ವಜನಿಕ ಗ್ರಂಥಾಲಯ ನಡೆಸುತ್ತಿರುವ ಸೈಯದ್ ಇಶಾಕ್ ಅವರನ್ನು ಗ್ರಂಥಪಾಲಕರ ದಿನವಾದ ಇಂದು ಹಾವೇರಿ ಜಿಲ್ಲೆಯ ಹಾನಗಲ್ ನ ಗುರು ಸದಾಶಿವ ಮಂಗಳ ಭವನ ವಿರಕ್ತಮಠದಲ್ಲಿ ಸನ್ಮಾನಿಸಲಾಯಿತು.

ಕಳೆದ 5-6 ವರ್ಷಗಳಿಂದ ಸ್ವಂತ ಗ್ರಂಥಾಲಯವನ್ನು ನಡೆಸುತ್ತಿರುವ 60 ವರ್ಷದ ಸೈಯದ್ ಇಶಾಕ್, ಯುಜಿಡಿ ಪೈಪ್ ಲೈನ್ ಕ್ಲೀನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ದುಡಿಮೆಯ ಆದಾಯದಲ್ಲಿ ಸಾರ್ಜನಿಕರಿಗೆ ಉಚಿತ ಗ್ರಂಥಾಲಯವನ್ನು ರಾಜೀವ್ ನಗರದ, ಕ್ರೀಡಾಂಗಣದ ಬಳಿಯಲ್ಲಿ ನಡೆಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಇವರ ಸಮಾಜ ಸೇವೆಯನ್ನು ಪರಿಗಣಿಸಿ ಇಂದು ಸನ್ಮಾನಿಸಲಾಯಿತು. (ಕೆ.ಎಂ.ಆರ್)

Leave a Reply

comments

Related Articles

error: