ಕರ್ನಾಟಕ

ಯಳಂದೂರು-ಹೊನ್ನೂರು ರಸ್ತೆಗೆ  ಗುದ್ದಲಿ ಪೂಜೆ ನೆರವೇರಿಸಿದ ಜಯಣ್ಣ

ರಾಜ್ಯ(ಚಾಮರಾಜನಗರ) ಆ 12 :- ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಿಂದ ಯಳಂದೂರು ಕ್ರಾಸ್‍ವರೆಗೆ ರಸ್ತೆ ಅಭಿವೃದ್ದಿಗೆ ಶಾಸಕ ಎಸ್.ಜಯಣ್ಣ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಹೊನ್ನೂರು ಗ್ರಾಮದಿಂದ ಯಳಂದೂರು ಕ್ರಾಸ್‍ವರೆಗಿನ ರಸ್ತೆಯು ಸಂಪೂರ್ಣವಾಗಿ ಹಾಳಾಗಿತ್ತು. ಇದರಿಂದ ಗ್ರಾಮದ ನಿವಾಸಿಗಳು ಯಳಂದೂರು ಪಟ್ಟಣಕ್ಕೆ ಹೋಗಬೇಕಾದರೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ಸುಮಾರು 3.24 ಕಿ.ಮೀವರೆಗಿನ ರಸ್ತೆಯನ್ನು ನಮ್ಮ ಗ್ರಾಮದ ನಮ್ಮ ರಸ್ತೆ ಯೋಜನೆಯಡಿಯಲ್ಲಿ 2.40 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮಾಡುವ ಮೂಲಕ ರಸ್ತೆಯನ್ನು ಅಭಿವೃದ್ದಿಪಡಿಸಲಾಗುವುದು.
ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿಗಳ ನಿರ್ಮಾಣ, ಗ್ರಾಮಗಳ ನಡುವೆ ಸಂಪರ್ಕ ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಆ ನಿಟ್ಟಿನಲ್ಲಿ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಂಜಿನಿಯರ್ ರಸ್ತೆಗಳ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಜೊತೆಗೆ ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಬಾಲರಾಜ್, ಜಿಪಂ ಸದಸ್ಯ ಯೋಗೇಶ್, ಕರಾಮುವಿವಿ ಆಡಳಿತ ಮಂಡಳಿ ಸದಸ್ಯ ಕಿನಕಹಳ್ಳಿ ರಾಚಯ್ಯ, ತಾಪಂ ಅಧ್ಯಕ್ಷ ನಂಜುಂಡಯ್ಯ, ಪಪಂ ಅಧ್ಯಕ್ಷ ನಿಂಗರಾಜು, ತಾಪಂ ಸದಸ್ಯ ನಿರಂಜನ್, ಗ್ರಾಪಂ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ನಗರಸಭೆ ಸದಸ್ಯ ಮುಡಿಗುಂಡ ಶಾಂತರಾಜು, ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಗ್ರಾಪಂ ಸದಸ್ಯ ಪುಟ್ಟಬಸವಯ್ಯ, ಇಂಜಿನಿಯರ್ ಹರೀಶ್, ಗುತ್ತಿಗೆದಾರ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಎನ್,ಎಸ್.ಎಚ್)

Leave a Reply

comments

Related Articles

error: