ಸುದ್ದಿ ಸಂಕ್ಷಿಪ್ತ

ಬಿ.ಕೆ.ಎಸ್. ಐಯ್ಯಂಗಾರ್ ಕುರಿತ ಕೃತಿ ಬಿಡುಗಡೆ

ಹಿಮಾಲಯ ಫೌಂಡೇಶನ್ ವತಿಯಿಂದ ಡಾ. ಬಿ.ಕೆ.ಎಸ್. ಐಯ್ಯಂಗಾರ್ ಅವರ ಕುರಿತಾದ ಯೋಗಭೀಷ್ಮ ಕೃತಿಯನ್ನು ಅ.22ರಂದು ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಬೆಳಗ್ಗೆ 11.30ಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಮೈಸೂರು ಯೋಗ ಶಾಲಾ ಸಂಸ್ಥಾಪಕರಾದ ಯೋಗಪ್ರಸಾದ್, ಹಿರಿಯ ಸಮಾಜಸೇವಕರಾದ ಕೆ. ರಘುರಾಮಯ್ಯ ವಾಜಪೇಯಿ ನಗರಪಾಲಿಕೆ ಸದಸ್ಯರಾದ ಬಿ.ವಿ. ಮಂಜುನಾಥ್, ಜೆ.ಎಸ್.ಎಸ್. ಯೋಗಿಕ್ ಫೌಂಡೇಶನ್ ಸಂಸ್ಥಾಪಕರಾದ ಶ್ರೀಹರಿ, ಹಿರಿಯ ಕವಯಿತ್ರಿ ಪುಷ್ಪ ಐಯ್ಯಂಗಾರ್, ಗಾಂಧಿನಗರದ ಶೃಂಗೇರಿ ಶಾರದಾಂಬ ದೇವಸ್ಥಾನದ ಉಪಾಧ್ಯಕ್ಷರಾದ ಎಂ.ಎಲ್. ಕಲ್ಯಾಣ ಕುಮಾರ್  ಸೇರಿದಂತೆ ಹಿಮಾಲಯ ಫೌಂಡೇಶನ್-ನ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

Leave a Reply

comments

Related Articles

error: