ಮೈಸೂರು

ಪೊಲೀಸ್ ಠಾಣೆಯಲ್ಲಿ ನೆಲೆ ನಿಂತಿದ್ದಾನೆ ಭಗವಾನ್ ಶ್ರೀಕೃಷ್ಣ ..! ಪ್ರತಿದಿನವೂ ವಿಶೇಷ ಪೂಜೆ

ಮೈಸೂರು,ಆ.14:- ಊರೆಂದ ಮೇಲೆ ಅಲ್ಲಿ ದೇವಸ್ಥಾನಗಳಿರುವುದು ಸಹಜ. ಇತ್ತೀಚೆಗೆ  ಆಸ್ಪತ್ರೆಗಳಲ್ಲಿಯೂ ಪುಟ್ಟ ದೇವಸ್ಥಾನಗಳನ್ನು ನಿರ್ಮಿಸುತ್ತಾರೆ. ಆದರೆ ಪೊಲೀಸ್ ಸ್ಟೇಶನ್ ನಲ್ಲಿ ದೇವಸ್ಥಾನವಿರುವುದನ್ನು ಎಲ್ಲಿಯಾದರೂ ಕೇಳಿದ್ದೀರಾ? ಅಥವಾ ನೋಡಿದ್ದೀರಾ..? ಆದರೆ ಸಾಂಸ್ಕೃತಿಕ ನಗರಿ ಮೈಸೂರಿನ ಪೊಲೀಸ್ ಠಾಣೆಯೊಳಗೆ ದೇವಾಲಯವೊಂದಿದೆ.

ಸಾಂಸ್ಕೃತಿಕ ನಗರಿ ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೇವಾಲಯವಿದೆ. ಈ ತರ ಠಾಣೆಯಲ್ಲಿ ದೇವಾಲಯವಿರುವುದು ರಾಜ್ಯದಲ್ಲಿಯೇ ಮೈಸೂರಿನಲ್ಲಿಯೇ ಎಂದು ಹೇಳಲಾಗುತ್ತಿದೆ. ಆರೋಪಗಳನ್ನು ನಡೆಸಿದರೆ, ಕಳ್ಳತನ, ದರೋಡೆಗಳನ್ನು ಮಾಡಿದರೆ ಶ್ರೀಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸಿಬಿಡುತ್ತೇವೆ ಹುಷಾರ್ ಎಂದು ಪೊಲೀಸರು ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ಅವರು ಹೇಳುವುದರಲ್ಲೂ ಅರ್ಥವಿದೆ. ಯಾಕೆಂದರೆ ಕಂಸನಿಗೆ ತನ್ನ ಸಹೋದರಿಯ ಒಡಲಲ್ಲಿ ಜನಿಸುವ  ಎಂಟನೇ ಮಗುವನಿಂದ ಮೃತ್ಯುವಾಗಲಿ ಎಂಬ ಶಾಪವಿತ್ತು. ಇದರಿಂದ ಕಂಸ ತನ್ನ ಸಹೋದರಿ ದೇವಕಿ ಮತ್ತು ವಸುದೇವನನ್ನು ಕಾರಾಗೃಹದಲ್ಲಿ ಬಂಧಿಸಿಟ್ಟಿದ್ದ. ಕಾರಾಗೃಹದಲ್ಲಿಯೇ ಶ್ರೀಕೃಷ್ಣನ ಜನ್ಮವೂ ಆಯಿತು. ಅದಕ್ಕೆ ಪೊಲೀಸರು ಶ್ರೀಕೃಷ್ಣನ ಜನ್ಮ ಸ್ಥಾನಕ್ಕೆ ಕಳುಹಿಸುತ್ತೇವೆ ಎಂದು ಆರೋಪಿಗಳನ್ನು ಎಚ್ಚರಿಸುತ್ತಿದ್ದರು. ವಿಚಿತ್ರವೆಂದರೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಇರುವುದು ಶ್ರೀಕೃಷ್ಣನ ದೇವಸ್ಥಾನವೇ. ಗೋವಿನ  ಹಿಂದೆ ಶ್ರೀಕೃಷ್ಣ ಕೊಳಲನ್ನು ಊದುತ್ತ ನಿಂತಿರುವ ವಿಗ್ರಹವಿದ್ದು ಅದಕ್ಕೆ ತಪ್ಪದೆ ಪ್ರತಿದಿನವೂ ಪೂಜೆ ಸಲ್ಲಿಸುತ್ತಾರಂತೆ. ಪಕ್ಕದಲ್ಲಿಯೇ ಇರುವ ಗಣಪತಿ ದೇವಸ್ಥಾನದ ಅರ್ಚಕರು ಪ್ರತಿದಿನವೂ ಬಂದು ಪೂಜೆ ಸಲ್ಲಿಸಿ ಹೋಗುತ್ತಾರಂತೆ. ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿಯಾಗಿದ್ದು ಪೊಲೀಸ್ ಠಾಣೆಯಲ್ಲಿರುವ ಶ್ರೀಕೃಷ್ಣನನ್ನು  ಹೂಗಳಿಂದ ಅಲಂಕರಿಸಿ, ನೈವೇದ್ಯಕ್ಕಾಗಿ ವಿವಿಧ ಭಕ್ಷ್ಯಗಳನ್ನು ತಯಾರಿಸಿದ್ದು, ಕೃಷ್ಣ ಮುಂದೆ ಇರಿಸಲಾಗಿತ್ತು.

ಈ ಕುರಿತು ಠಾಣೆಯ ಸಿಬ್ಬಂದಿಗಳು ಮಾತನಾಡಿ ಭಗವಂತನ ಪ್ರತಿದಿನವೂ ಇಲ್ಲಿ ಪೂಜೆ ನೆರವೇರುತ್ತದೆ. ಠಾಣೆಯಲ್ಲಿಯೇ ಕರ್ತವ್ಯ ನಿರ್ವಹಿಸುವವರು ಪೂಜೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದರು. ಒಟ್ಟಿನಲ್ಲಿ ಪೊಲೀಸ್ ಠಾಣೆಯ ಒಳಗಡೆಯೂ ದೇವಾಲಯವಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: