
ಕರ್ನಾಟಕ
ಕಿರುಕುಳ ತಾಳಲಾರದ ಪತ್ನಿ ಆತ್ಮಹತ್ಯೆ
ಬೆಂಗಳೂರು: ಪತಿಯ ಕಿರುಕುಳ ತಾಳಲಾರದೇ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಾಗಡಿಯಲ್ಲಿ ನಡೆದಿದೆ.
ಪತಿ ರಮೇಶ್ ನ ಕಿರುಕುಳ ತಾಳಲಾರದೇ ತೇಜಾವತಿ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 12ವರ್ಷಗಳ ಹಿಂದೆಯೇ ರಮೇಶ್ ಹಾಗೂ ತೇಜಾವತಿ ದಂಪತಿ ಮದುವೆಯಾಗಿದ್ದು, ಒಂದು ಮುದ್ದಾದ ಮಗುವಿದೆ. ಗಂಡ ಹೆಂಡತಿ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರು. ಗಂಡ ರಮೇಶನಿಗೆ ಅನೈತಿಕ ಸಂಬಂಧವಿದೆ ಎಂದು ದಂಪತಿ ನಡುವೆ ಬೆಳಗ್ಗೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದರಿಂದ ತೇಜಾವತಿ ವಿಷ ಸೇವನೆ ಮಾಡಿದ್ದಾರೆ. ಕೂಡಲೇ ತೇಜಾವತಿಯರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಲಕ್ಷ್ಮೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತೇಜಾವತಿ ಮೃತಪಟ್ಟಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ತೇಜಾವತಿಯ ಗಂಡ ರಮೇಶ್ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ( ವರದಿ: ಪಿ ಜೆ )