
ಮೈಸೂರು
ರೈತರ ಕುಟುಂಬಗಳ ನೆರವಿಗಾಗಿ ಭಾರತದಾದ್ಯಂತ ಸಂಚರಿಸಲಿರುವ ಬ್ರಿಟನ್ ಪ್ರಜೆ
ಮೈಸೂರು,ಆ.14:- ವಿದೇಶಿ ಪ್ರಜೆಯೋರ್ವರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರಿಗಾಗಿ ಮರುಗಿದ್ದು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ನೆರವಿಗಾಗಿ ಭಾರತದಾದ್ಯಂತ ಸಂಚಾರ ಕೈಗೊಂಡಿದ್ದಾರೆ.
ಕನ್ಯಾಕುಮಾರಿಯಿಂದ ಕಾಲ್ನಡಿಗೆ ಆರಂಭಿಸಿರುವ 28ರ ವಯೋಮಾನದ ಬ್ರಿಟನ್ ಪ್ರಜೆ ಡೇವಿಡ್ ರೈತ ಕುಟುಂಬದ ನೆರವಿಗೆ 6 ಸಾವಿರ ಕಿ.ಮೀ ಪಾದಯಾತ್ರೆ ನಡೆಸುತ್ತಿದ್ದಾರೆ. ಕನ್ಯಾಕುಮಾರಿ, ಗುಂಡ್ಲುಪೇಟೆ, ಮೈಸೂರು ಮಂಡ್ಯ,ರಾಮನಗರ ಹಾಗೂ ಬೆಂಗಳೂರು ಮಾರ್ಗವಾಗಿ ಅಮೃತ್ ಸರ ತಲುಪುವ ಗುರಿ ಹೊಂದಿದ್ದು, ಮಾರ್ಗದುದ್ದಕ್ಕೂ ಜನರಲ್ಲಿ ರೈತ ಜಾಗೃತಿ ಮೂಡಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ, ಸಹಜ ಕೃಷಿ ಸೇರಿದಂತೆ ಡೇವಿಡ್ ಗೆ ಹಲವು ಸಂಘಟನೆಗಳು ಬೆಂಬಲ ನೀಡಿವೆ. (ಕೆ.ಎಸ್,ಎಸ್.ಎಚ್)