ಮನರಂಜನೆ

ಬಿಗ್ ಬಾಸ್ ನಲ್ಲಿ ಕನ್ನಡದಲ್ಲಿ ಮಾತನಾಡಿದ ಜೂ.ಎನ್ಟಿಆರ್..!

ಹೈದರಾಬಾದ್, ಆ.14-ತೆಲುಗು ಭಾಷೆಯಲ್ಲಿ ಪ್ರಥಮ ಬಾರಿಗೆ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನ ನಿರೂಪಣೆ ಮಾಡುತ್ತಿರುವ ಜೂನಿಯರ್ ಎನ್ಟಿಆರ್ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಎನ್ಟಿಆರ್ ಕನ್ನಡದಲ್ಲಿ ಮಾತನಾಡಿರುವುದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ, ಕನ್ನಡಿಗರ ಮನ ಗೆದಿದ್ದಾರೆ.

ತೆಲುಗು ಬಿಗ್ ಬಾಸ್ ನಲ್ಲಿ ಮಾತನಾಡಿರುವ ಸ್ಪರ್ಧಿಗಳಲ್ಲಿ ಒಬ್ಬರಾದ ಹರಿತೇಜ ಕನ್ನಡದವರು. ಇವರೊಂದಿಗೆ ಮಾತನಾಡುವ ವೇಳೆ ಎನ್ಟಿಆರ್ ಕನ್ನಡದಲ್ಲಿ ಮಾತನಾಡಿದ್ದಾರೆ. ಆಗ ಹರಿತೇಜ ನಾನು ಕನ್ನಡತಿ. ಹಾಗೆಯೇ ನನ್ನ ಪತಿ ಕೂಡ ಕನ್ನಡಿಗರೇ ಎಂದು ಹೇಳಿದ್ದಾರೆ. ಆಗ ಎನ್ಟಿಆರ್ ಅವರು ನನ್ನ ತಾಯಿ ಕೂಡ ಕನ್ನಡದವರು. ಅವರು ಕುಂದಾಪುರದವರು ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲರ ಮೆಚ್ಚುಗೆಗೆ ಎನ್ಟಿಆರ್ ಪಾತ್ರರಾಗಿದ್ದಾರೆ.

ಕನ್ನಡತಿ ಹರಿತೇಜ ಮನಸು ಮಮತ, ತಾಳಿ ಕಟ್ಟುವ ಶುಭವೇಳೆ, ಅಭಿಶೇಕಮ್ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಧಮ್ಮು, ಅತ್ತಾರಿಂಟಿಕಿ ದಾರೇದಿ ಸಿನಿಮಾದಲ್ಲೂ ನಟಿಸಿದ್ದು, ಟಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: