ಕರ್ನಾಟಕಪ್ರಮುಖ ಸುದ್ದಿ

ಆದಿಚುಂಚನಗಿರಿ ಮಠದ ಶ್ರೀಗಳ ಮುಂದೆ ಅಮಿತ್ ಷಾ ಕಾಲುಮೇಲೆ ಕಾಲು ಹಾಕಿಕೊಂಡ ವಿಚಾರ : ಹೆಚ್.ವಿಶ್ವನಾಥ್ ಆಕ್ರೋಶ

ರಾಜ್ಯ(ಮಂಡ್ಯ)ಆ.14:-  ಅಮಿತ್ ಷಾ  ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿಯವರ  ಮುಂದೆ ಕಾಲು ಮೇಲೆ ಕಾಲ ಹಾಕಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಅಮಿತ್ ಷಾ ವಿರುದ್ಧ ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅವರಿಗೆ ಸಂಸ್ಕೃತಿ ಇದೆ ಅಂತ ಯಾರು ಹೇಳಿದ್ದು, ಅಮಿತ್ ಷಾ ಸಂಸ್ಕೃತಿ ಇಲ್ಲದವರು.  ದೇಶ ಭಕ್ತಿ ರಾಷ್ಟ್ರ ಭಕ್ತಿ ಎನ್ನುತ್ತಾರೆ. ನಾವು ಸೇರಿದಂತೆ ಯಾರಾದರೂ ಜಗದ್ಗುರು ಎದುರು ಹಾಗೆ ಕುಳಿತುಕೊಳ್ಳುತ್ತಾರಾ? ನಮ್ಮ ಮುಖ್ಯಮಂತ್ರಿ ಮತ್ತು ಸಚಿವ ಮಹದೇವಪ್ಪ ಕೂಡ ಶೂ ಹಾಕಿಕೊಂಡು ಪೂಜೆ ಮಾಡುತ್ತಾರೆ.  ಇಡೀ ರಾಜ್ಯ ಮತ್ತು ದೇಶ ಮಾಧ್ಯಮದಲ್ಲಿ ನೋಡುತ್ತಿರುತ್ತೆ. ಎಚ್ಚರಿಕೆಯಿಂದ ಇರಬೇಕು ಎಂದು ವ್ಯಂಗ್ಯವಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: