ಕರ್ನಾಟಕಮೈಸೂರು

ವಿವಿಧ ಅರ್ಜಿ ಆಹ್ವಾನ

ಪುಸ್ತಕಗಳ ಆಹ್ವಾನ: ಗ್ರಂಥಾಲಯ ವಿಭಾಗವು 2016ರ ಪುಸ್ತಕಕ್ಕೆ ಆಹ್ವಾನ ನೀಡಿದೆ. ಸಾಹಿತ್ಯ, ವಿಜ್ಞಾನ, ಕಲೆ, ಮಕ್ಕಳ ಸಾಹಿತ್ಯ, ಕನ್ನಡ, ಇಂಗ್ಲೀಷ್ ಮತ್ತು ಭಾರತದ ಎಲ್ಲಾ ಭಾಷೆಗಳ ಪುಸ್ತಕಗಳನ್ನೂ ಆಹ್ವಾನಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2423678ನ್ನು ಸಂಪರ್ಕಿಸಬಹುದು.

ದಸರಾ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ: ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉಪ ಸಮಿತಿಯು 2016ರ ದಸರಾ ಉತ್ಸವದಲ್ಲಿ ವಿವಿಧ ವೇದಿಕೆಗಳ ಮೇಲೆ ಕಾರ್ಯಕ್ರಮ ನೀಡಲು ಕಲಾವಿದರನ್ನು ಆಹ್ವಾನಿಸಿದೆ. ವೈಯುಕ್ತಿಕ ಮತ್ತು ಸಮೂಹ ಕಾರ್ಯಕ್ರಮಗಳನ್ನು ನೀಡ ಬಯಸುವವರು, ಸಂಗೀತ, ನಾಟಕ, ನೃತ್ಯ, ಗಮಕ, ಹರಿಕಥೆ, ಯಕ್ಷಗಾನ ಇತರ ಜಾನಪದ ಕಾರ್ಯಕ್ರಮ ನೀಡಬಯಸುವವರು ಕನ್ನಡ ವಿಭಾಗ ಮತ್ತು ಸಾಂಸ್ಕೃತಿಕ ವಿಭಾಗ ಇಲ್ಲಿ ಸೆಪ್ಟೆಂಬರ್ 8ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0821-2513225ನ್ನು ಸಂಪರ್ಕಿಸಬಹುದು.

ಬ್ರೆವರಿ ಅವಾರ್ಡ್ ಗೆ ಅರ್ಜಿ ಆಹ್ವಾನ: ನವದೆಹಲಿಯ ಭಾರತೀಯ ಮಕ್ಕಳ ಕಲ್ಯಾಣ ಸಮಿತಿಯು ಮಕ್ಕಳ ಬ್ರೆವರಿ ಅವಾರ್ಡ್  ನೀಡಲು ಅರ್ಜಿ ಆಹ್ವಾನಿಸಿದೆ. 6ರಿಂದ 18ರ ವಯಸ್ಸಿನ ಮಕ್ಕಳು ಸೆಪ್ಟೆಂಬರ್ 30ರೊಳಗೆ ರಾಜ್ಯ ಮಹಿಳಾ ಮತ್ತು ಕಲ್ಯಾಣ ಸಮಿತಿಗೆ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ದೂ.ಸಂ.0821-2498031ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: