Uncategorized

ಪಿಎಫ್‍ಐ ನಿಂದ ಸ್ವಾತಂತ್ರ್ಯೋತ್ಸವ ಆಚರಣೆ

ರಾಜ್ಯ(ಮಡಿಕೇರಿ) ಆ.15 :-ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ 71ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಜರುಗಿತು.

ಪಿ.ಎಫ್.ಐ ಜಿಲ್ಲಾಧ್ಯಕ್ಷ ಟಿ.ಎ.ಹ್ಯಾರೀಸ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಸ್ವಾತಂತ್ರಕ್ಕಾಗಿ ರಣರಂಗದಲ್ಲಿ ಹೋರಾಡಿ ಹುತಾತ್ಮರಾದ ನೈಜ ಸ್ವಾತಂತ್ರ ಹೋರಟಗಾರರು ಹುಟ್ಟಿ ಬೆಳೆದ ಪುಣ್ಯ ಭೂಮಿ ಭಾರತ ಎಂದು ಬಣ್ಣಿಸಿದರು. ಪ್ರಜಾಪ್ರಭುತ್ವ ದೇಶದಲ್ಲಿ ಆಚಾರ ವಿಚಾರ, ಧರ್ಮ, ಜಾತಿ, ವರ್ಗಗಳು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಯ್ದುಕೊಂಡಿವೆ. ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ. ಆದರೆ, ಕೆಲವೊಂದು ದುಷ್ಟ ಶಕ್ತಿಗಳು ಧರ್ಮ ಧರ್ಮಗಳ ನಡುವೆ ಒಡಕು ಉಂಟು ಮಾಡಿ ದೇಶದ ಶಾಂತಿಯನ್ನು ಕದಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಎಸ್‍ಡಿಪಿಐ ಜಿಲ್ಲಾಧ್ಯಕ್ಷರಾದ ಅಮಿನ್ ಮೊಹಿಸಿನ್, ಉಪಾಧ್ಯಕ್ಷರಾದ ಲಿಯಾಕತ್ ಆಲಿ ಮತ್ತಿತರರು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: