ಮೈಸೂರು

ಕಳಪೆ ಕಾಮಗಾರಿ : ಹಳ್ಳಕ್ಕೆ ಬಿದ್ದ ಕಾರು

ಮೈಸೂರು,ಆ.16:- ಮೈಸೂರಿನಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಇದರಿಂದ ಹಲವು ಅನಾಹುತಗಳು ಸಂಭವಿಸಿವೆಯಾದರೂ ಪ್ರಾಣಾಪಾಯ ಸಂಭವಿಸಿಲ್ಲ.

ನಗರದ ವಿಶ್ವೇಶ್ವರ ನಗರದಲ್ಲಿ ಕುಡಿಯುವ ನೀರಿಗಾಗಿ ತೆಗೆಸಿದ್ದ  ಪೈಪ್ ಲೈನ್  ಕಾಮಗಾರಿ ಕಳಪೆಯದಾಗಿದ್ದು, ತೋಡಿದ್ದ ಹಳ್ಳಕ್ಕೆ ಕಾರುಗಳು ಬಿದ್ದಿವೆ. ಇಷ್ಟಾದರೂ  ಅಧಿಕಾರಿಗಳು ಸ್ಥಳಕ್ಕೆ  ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ.  ಕಳಪೆ ಕಾಮಗಾರಿಯಿಂದ  ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: