ಮೈಸೂರು

ಕನ್ನಡ ಜಾನಪದ ಪರಿಷತ್ ಮೈಸೂರು ಘಟಕ ಅಸ್ತಿತ್ವಕ್ಕೆ

ಬೆಳಕಿಗೆ ಬಾರದ ಜಾನಪದ ಕಲಾ ಪ್ರಕಾರಗಳನ್ನು, ವಸ್ತುಗಳನ್ನು ಹಾಗೂ ಕಲಾವಿದರಿಗೆ ಮುಖ್ಯ ವೇದಿಕೆ ಒದಗಿಸುವ ಸದುದ್ದೇಶದಿಂದ ಕನ್ನಡ ಜಾನಪದ ಪರಿಷತ್ ನ ಮೈಸೂರು ಜಿಲ್ಲಾ ಘಟಕವನ್ನು ಉದ್ಘಾಟಿಸಲಾಗುವುದು ಎಂದು ಕಜಾಪ ಜಿಲ್ಲಾ ಘಟಕದ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್ ಹೆಚ್. ತಿಳಿಸಿದರು.

ಅವರು ನಗರದಲ್ಲಿಂದು ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ,  ಅ.24ರಂದು, ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಬೆಳಿಗ್ಗೆ 10:30ಕ್ಕೆ  ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಕನ್ನಡ ಜಾನಪದ ಪರಿಷತ್ ನ ಮೈಸೂರು ಜಿಲ್ಲಾ ಘಟಕವನ್ನು ಉದ್ಘಾಟಿಸಲಿದ್ದು, ಶಾಸಕ ಹಾಗೂ ಪರಿಷತ್ ನ ಗೌರವಾಧ್ಯಕ್ಷ ಹೆಚ್.ಪಿ.ಮಂಜುನಾಥ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಹೆಚ್.ಎಸ್.ಮಹದೇವಪ್ರಸಾದ್, ತನ್ವೀರ್ ಸೇಠ್, ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ಸಂಸದರಾದ ಪ್ರತಾಪ್ ಸಿಂಹ, ದ್ರುವನಾರಾಯಣ, ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಕೆ.ವೆಂಕಟೇಶ್, ಜಿ.ಟಿ.ದೇವೇಗೌಡ, ಕಾಂಗ್ರೆಸ್ ಮುಖಂಡ ಡಾ.ಯತೀಂದ್ರ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಹೆಚ್. ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಜಿ.ಪಂ.ಅಧ್ಯಕ್ಷೆ ನಯಿಮಾಸುಲ್ತಾನ್ ಹಾಗೂ ಇತರರು ಉಪಸ್ಥಿತರಿರುವರು.

ಕಜಾಪ ನೂತನ ಪದಾಧಿಕಾರಿಗಳು : ಕ್ಯಾತನಹಳ್ಳಿ ಪ್ರಕಾಶ್ ಹೆಚ್-ಅಧ್ಯಕ್ಷ, ಡಾ.ವಿಜಯಲಕ್ಷ್ಮೀ ಮನಾಪುರ – ಕಾರ್ಯದರ್ಶಿ, ಡಾ.ಎಸ್.ಕೃಷ್ಣಪ್ಪ ಕಿತ್ತೂರು – ಖಜಾಂಚಿ, ಬೆಸೂರು ಮೋಹನ್ ಪಾಳೆಗಾರ್ – ಪತ್ರಿಕಾ ಕಾರ್ಯದರ್ಶಿ, ಸುರೇಶ್- ಜಂಟಿ ಕಾರ್ಯದರ್ಶಿ, ಗಣೇಶ ಕುಮಾರಸ್ವಾಮಿ – ಸಂಚಾಲಕ ಹಾಗೂ ಡಾ.ವಿನೋದ್ ಸಂಘಟನಾ ಕಾರ್ಯದರ್ಶಿ, ಡಾ.ಡಿ.ರವಿ, ಡಾ.ಕುಮಾರ್, ಡಾ.ವಿಶ್ವನಾಥ್ ಹಾಗೂ ಇತರರು ಕಾರ್ಯಕಾರಿ ಸದಸ್ಯರಾಗಿ ಆಯ್ಕೆಯಾಗಿದ್ದು ಪರಿಷತ್ ಅಲ್ಲಿ ಅವಿದ್ಯಾವಂತರಿಗೂ ಅವಕಾಶ ನೀಡಲಾಗುವುದು ಎಂದು ಅಧ್ಯಕ್ಷ ತಿಳಿಸಿದರು.

 

Leave a Reply

comments

Related Articles

error: